ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭೀಕರ ಉಗ್ರ ದಾಳಿ ನಡೆದಿದ್ದು ಈ ವೇಳೆ 44 ಯೋಧರು ಹುತಾತ್ಮರಾದರು. ಇದರಲ್ಲಿ ಓರ್ವರಾದ ಸುಕ್ ಜಿಂದರ್ ಸಿಂಗ್ ದಾಳಿಯಾಗುವ ಒಂದು ನಿಮಿಷಕ್ಕೂ ಮೊದಲು ತಮ್ಮ ಪತ್ನಿಗೆ ವಿಡಿಯೋ ಕಳುಹಿಸಿದ್ದ ವಿಚಾರ ಇದೀಗ ಬಹಿರಂಗವಾಗಿದೆ.
ನವದೆಹಲಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14 ರಂದು ಉಗ್ರರ ದಾಳಿ ನಡೆದಿದ್ದು, ಅಂದು 44 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಉಗ್ರ ಸ್ಫೋಟಕ ತುಂಬಿದ್ದ ಕಾರನ್ನು ಯೋಧರು ತೆರಳುತ್ತಿದ್ದ ಬಸ್ ಗೆ ಡಿಕ್ಕಿಯಾಗಿಸಿ ಈ ದುರಂತ ಸಂಭವಿಸಿತ್ತು.
ಈ ಘಟನೆಗೂ ಒಂದು ನಿಮಿಷ ಮೊದಲು CRPF ಯೋಧ ಸುಕ್ ಜಿಂದರ್ ಸಿಂಗ್ ಅವರ ಪತ್ನಿಗೆ ವಿಡಿಯೋ ಒಂದನ್ನು ಕಳುಹಿಸಿದ್ದರು.
ಪಾಕ್‌ನಿಂದ ಯುದ್ಧ ಸಿದ್ಧತೆ; ಸೈನಿಕರಿಗೆ ಅಲರ್ಟ್
CRPF ಯೋಧರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ವಿಡಿಯೋ ಮಾಡಿ ತಮ್ಮ ಪತ್ನಿಗೆ ಕಳುಹಿಸಿದ್ದರು. ಆದರೆ ಸಿಂಗ್ ಅವರು ಈ ವಿಡಿಯೋ ಕಳುಹಿಸಿದ ದಿನ ಅದನ್ನು ನೋಡಿರಲಿಲ್ಲ. ಆದರೆ ದಾಳಿ ನಡೆದ ಮರುದಿನ ಅವರ ಪತ್ನಿ ಈ ವಿಡಿಯೋ ವೀಕ್ಷಿಸಿದ್ದರು.
ಸಿಂಗ್ ಅವರಿಂದ ಬಂದ ಕೊನೆಯ ವಿಡಿಯೋ ಇದಾಗಿದ್ದು, ಈ ದಾಳಿಯ ಬಳಿಕ ಮಾಧ್ಯಮಗಳೊಂದಿಗೆ ಅವರ ಪತ್ನಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಂಪೂರ್ಣ ಮಂಜುಕವಿದ ಹೆದ್ದಾರಿ ಹಾಗೂ ತಮ್ಮ ಮುಖವನ್ನು ಚಿತ್ರಿಸಿ ಕಳುಹಿಸಿದ್ದಾರೆ.
ಯೋಧ ಗುರು ತಿಥಿ ವೆಚ್ಚ ಭರಿಸುವೆ: ತಮ್ಮಣ್ಣ
ತಮ್ಮ 19ನೇ ವಯಸ್ಸಿನಲ್ಲೇ 2003ರಲ್ಲಿ ಸೇನಾಪಡೆಗೆ ಸೇರಿದ್ದ ಸಿಂಗ್ ಇದೀಗ ಹೆಡ್ ಕಾನ್ಸ್ ಟೇಬಲ್ ಆಗಿ ಬಡ್ತಿ ಹೊಂದಿದ್ದರು.
ಕಳೆದ 2 ದಶಕಗಳಲ್ಲೇ ಸೇನಾ ಪಡೆಯ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯಲ್ಲಿ ಸಿಂಗ್ ಹುತಾತ್ಮರಾಗಿದ್ದು, 7 ತಿಂಗಳ ಪುಟ್ಟ ಮಗು, ತಂದೆ ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 23, 2019, 12:31 PM IST