CRPF ಯೋಧರ ಸಾಹಸಕ್ಕೆ ನೆಟ್ಟಿಗರ ಸಲಾಂ| ಜೀವವನ್ನೇ ಪಣಕ್ಕಿಟ್ಟು ಬಾಲಕಿಯ ಪ್ರಾಣ ಕಾಪಾಡಿದ ಯೋಧರು
ಶ್ರೀನಗರ[ಜು.15]: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಬಾರೀ ವೈರಲ್ ಆಗುತ್ತಿದ್ದು, ಇದರಲ್ಲಿ CRPF ಯೋಧರು ತಮ್ಮ ಜೀವವನ್ನು ಪಣಕ್ಕಿಟ್ಟು ಮಗುವಿನ ಪ್ರಾಣ ಕಾಪಾಡಿರುವ ದೃಶ್ಯಗಳಿವೆ. CRPF ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾದ ಈ ವಿಡಿಯೋ ನೋಡುಗರ ಮನ ಗೆದ್ದಿದ್ದು, ಯೋಧರ ಸಾಹಸಕ್ಕೆ ಸಲಾಂ ಎಂದಿದ್ದಾರೆ.
23 ಸೆಕೆಂಡ್ ನ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ CRPF '176 ಬೆಟಾಲಿಯನ್‌ನ ಕಾನ್ಸ್ಟೇಬಲ್ ಎಂ. ಜಿ ನಾಯ್ಡು ಹಾಗೂ ಕಾನ್ಸ್ಟೇಬಲ್ ಎನ್ ಉಪೇಂದ್ರ ನದಿಯಲ್ಲಿ ಮುಳುಗುತ್ತಿದ್ದ 14 ವರ್ಷದ ಬಾಲಕಿಯನ್ನು ಕಾಪಾಡಿದ್ದಾರೆ. ಧೈರ್ಯವಂತ ಯೋಧರು ಏನನ್ನೂ ಯೋಚಿಸದೆ ನೀರಿನಿಂದ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಧುಮುಕಿದ್ದಾರೆ. ಹೋಲಿಸಲಾಗದ ವೀರತೆ ಹಾಗೂ ತಂಡದ ಸ್ಫೂರ್ತಿ ಒಂದು ಜೀವವನ್ನು ಕಾಪಾಡಿದೆ' ಎಂದು ಬರೆದಿದೆ.
ಆಮ್ ಆದ್ಮಿ ಪಕ್ಷದ ನಾಯಕ ಕುಮಾರ ವಿಶ್ವಾಸ್ ಕೂಡಾ ಯೋಧರ ಈ ಸಾಹಸಕ್ಕೆ ಭೇಷ್ ಎಂದಿದ್ದಾರೆ.
ಜುಲೈ 15ರಂದು ಶೇರ್ ಮಾಡಿಕೊಂಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ.
