ನಿನ್ನೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಆಶ್ಚರ್ಯವೆಂದರೆ ಸತತ ಸುರಿದ ಮಳೆಗೆ ಮೊಸಳೆ ಮರಿಯೊಂದು ಪತ್ತೆಯಾಗಿದೆ.

ಮೈಸೂರು(ಅ.06): ನಿನ್ನೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಆಶ್ಚರ್ಯವೆಂದರೆ ಸತತ ಸುರಿದ ಮಳೆಗೆ ಮೊಸಳೆ ಮರಿಯೊಂದು ಪತ್ತೆಯಾಗಿದೆ.

ಭಾರೀ ಪ್ರಮಾಣದ ಮಳೆಯಿಂದಾಗಿ ಮೊಸಳೆ ಮರಿಯೊಂದು ನೀರಿನಲ್ಲಿ ತೇಲಿ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ‌ಕಾರೇಕುರ ಗ್ರಾಮದ ಶಶಿಕುಮಾರ್ ಎಂಬುವರ ಜಮೀನಿನಲ್ಲಿ ಈ ಮೊಸಳೆ ಮರಿ ಪತ್ತೆಯಾಗಿದೆ. ಆದರೆ ಈ ಮೊಸಳೆ ಮರಿ ಮೀನು ಸಾಕಾಣೆಯ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ. ಇಲ್ಲಿಗೆ ಮೀನು ತಿನ್ನಲು ಈ ಮೊಸಳೆ ಮರಿ ಬಂದಿರಬಹುದೆಂದು ಶಂಕಿಸಲಾಗಿದ್ದು, ಇನ್ನೂ ಇಲ್ಲಿನ ಸ್ಥಳೀಯರು ಈ ಮೊಸಳೆ ಮರಿಗೆ ಬಲೆ ಹಾಕಿ ರಕ್ಷಣೆ ಮಾಡಿದ್ದಾರೆ.

ಆದರೆ ಈ ಮೊಸಳೆ ಮರಿಯೊಂದಿಗೆ ದೊಡ್ಡ ಮೊಸಳೆಯೂ ಬಂದಿರಬಹುದೆಂಬ ಆತಂಕ ಜನರಲ್ಲಿ ಉಂಟಾಗಿದೆ. ಸದ್ಯಕ್ಕೆ ಈ ಮೊಸಳೆ ಮರಿಯನ್ನು ಮೃಗಾಲಯದ ವಶಕ್ಕೆ ನೀಡಲಾಗುತ್ತೆ ಎಂದು ಜಮೀನನ ಮಾಲೀಕರು ತಿಳಿಸಿದ್ದಾರೆ.