ತಿರುವನಂತಪುರಂ : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಆಂಬುಲೆನ್ಸ್ ಚಾಲಕನ ದುಷ್ಕೃತ್ಯದಿಂದ ಜೀವ ಕಳೆದುಕೊಂಡಿದ್ದಾನೆ.

ಕೇರಳದ ಪಲಕ್ಕಾಡ್ ನಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಆತ ಗಾಯಗೊಂಡಿದ್ದ. ಪಲಕ್ಕಾಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ತ್ರಿಶೂರ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.

ಈ ವೇಳೆ ಗಾಯಾಳು ಆಂಬುಲೆನ್ಸ್ ನಲ್ಲಿ ಮೂತ್ರ ಮಾಡಿದ್ದಕ್ಕೆ ರೊಚ್ಚಿಗೆದ್ದ ಚಾಲಕ ಗಾಯಾಳು ಇದ್ದ ಸ್ಟ್ರೆಚರ್ ಅನ್ನು ಜೋರಾಗಿ ಹೊರಕ್ಕೆಳೆದಿದ್ದಾನೆ. ಆ ರಭಸಕ್ಕೆ ಗಾಯಾಳು ಕೆಳಕ್ಕೆ ಬಿದ್ದಿದ್ದ.

ಆಸ್ಪತ್ರೆ ಸಿಬ್ಬಂದಿ ಅವನನ್ನು ಮೇಲಕ್ಕೆತ್ತಿ ವ್ಹೀಲ್ ಚೇರ್ ನಲ್ಲಿ ಕೂರಿಸಿ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.