ಶಬೀರ್ ಹುಸೇನ್​ ಬಳಿಯಿದ್ದ, ದಾಖಲಾತಿಗಳನ್ನ ಪಡೆಯಲು ಸಿಸಿಬಿ ಪೊಲೀಸರ ತಂಡ, 2013ರ ಫೆಬ್ರವರಿಯಲ್ಲಿ ಡಿಕಸನ್​ ರಸ್ತೆಯಲ್ಲಿರುವ ಶಬೀರ್ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿತ್ತು. ಶಬೀರ್​ ನನ್ನ ಅಜ್ನಾತ ಸ್ಥಳಕ್ಕೆ ಕರೆದೊಯ್ದ, ಪೊಲೀಸರು ನಾಲ್ಕು ದಿನಗಳ ಕಾಲ ಅಕ್ರಮವಾಗಿ ಗೃಹ ಬಂದನದಲ್ಲಿಟ್ಟಿದ್ದರು. ಶಬೀರ್ ಸಹೋದರ ಹುಸೇನ್ ಹೈಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಸಲ್ಲಿಸಿದಾಗ ಪೊಲೀಸರು ಆತನನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ವ್ಯಕ್ತಿಯೋಬ್ಬನನ್ನ ಅಕ್ರಮವಾಗಿ ಬಂಧನ ಮಾಡಿದ ಹಿನ್ನೆಲೆಯಲ್ಲಿ ಐವರು ಪೊಲೀಸರ ವಿರುದ್ದ ತನಿಖೆಗೆ ನ್ಯಾಯಾಲಯ ಆದೇಶಿಸಿದೆ. ಶಬೀರ್ ಹುಸೇನ್ ಎಂಬಾತನನನ್ನು ಅಕ್ರಮವಾಗಿ ಬಂಧಿಸಿ ಹಿಂಸೆ ನೀಡಿದ ಆರೋಪ ಪೊಲೀಸರ ಮೇಲಿತ್ತು. ಸಿಸಿಬಿ ಡಿಸಿಪಿ ಆಗಿದ್ದ ದೇವರಾಜ್, ನಿವೃತ್ತ ಎಸಿಪಿ ಸಿದ್ದಪ್ಪ, ಸಬ್​-ಇನ್ಸ್​ಪೆಕ್ಟರ್ ದೀಪಕ್​ ಸೇರಿದಂತೆ ಐದು ಮಂದಿ ಪೊಲೀಸರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಬೀರ್ ಹುಸೇನ್​ ಬಳಿಯಿದ್ದ, ದಾಖಲಾತಿಗಳನ್ನ ಪಡೆಯಲು ಸಿಸಿಬಿ ಪೊಲೀಸರ ತಂಡ, 2013ರ ಫೆಬ್ರವರಿಯಲ್ಲಿ ಡಿಕಸನ್​ ರಸ್ತೆಯಲ್ಲಿರುವ ಶಬೀರ್ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿತ್ತು. ಶಬೀರ್​ ನನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದ, ಪೊಲೀಸರು ನಾಲ್ಕು ದಿನಗಳ ಕಾಲ ಅಕ್ರಮವಾಗಿ ಗೃಹ ಬಂದನದಲ್ಲಿಟ್ಟಿದ್ದರು. ಶಬೀರ್ ಸಹೋದರ ಹುಸೇನ್ ಹೈಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಸಲ್ಲಿಸಿದಾಗ ಪೊಲೀಸರು ಆತನನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಕಳ್ಳತನ ಪ್ರಕರಣದ ಆರೋಪ ಹೊರಿಸಿದ್ದ ಸಿಸಿಬಿ ಪೊಲೀಸರು ಆರೋಪವನ್ನ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 3ನೇ ಎಸಿಎಂಎಂ ನ್ಯಾಯಾಲಯ ಐವರು ಆರೋಪಿಗಳ ವಿರುದ್ದ ಐಪಿಸಿ 120 (ಬಿ), 220, 323, 330 ಮತ್ತು 348 ಸೆಕ್ಷನ್​ಗಳ ಅನ್ವಯ ತನಿಖೆ ಮಾಡಲು ಆದೇಶಿಸಿದೆ.