ಚೆನ್ನೈ(ಆ.16): ಸ್ವಾತಂತ್ರ್ಯ ದಿನದಂದು ಚರಂಡಿಗೆ ಬಿದ್ದಿದ್ದ ನವಜಾತ ಶಿಶುವನ್ನು ತಮಿಳುನಾಡಿನ ಚೆನ್ನೈನಲ್ಲಿ ರಕ್ಷಿಸಲಾಗಿದೆ. ತಮಿಳುನಾಡಿನ 45 ವರ್ಷದ ವಲಸಾರವಕ್ಕಂ ಎಂಬ ಮಹಿಳೆ ಈ ಮಗುವನ್ನು ಬಚಾವ್ ಮಾಡಿದ್ದು, ಮಗುವನ್ನು ರಕ್ಷಣೆ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಸ್ವಾತಂತ್ರ್ಯ ದಿನದಂದೇ ಸಿಕ್ಕ ಮಗುವಿಗೆ ಸುದಾನ್‌ಥಿರಂ ಅಥವಾ ಸ್ವಾತಂತ್ರ್ಯ ಎಂದು ಹೆಸರಿಡಲಾಗಿದೆ. ಮಗು ಅಳುತ್ತಿದ್ದ ಶಬ್ದ ಕೇಳಿ ಮಹಿಳೆ ಗಂಡು ಶಿಶುವನ್ನ ಚರಂಡಿಯಿಂದ ಎತ್ತಿಕೊಂಡು ರಕ್ಷಣೆ ಮಾಡಿದ್ದಾರೆ. ಸದ್ಯ, ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅದನ್ನು ಅನಾಥಾಶ್ರಮಕ್ಕೆ ಸೇರಿಸಲಾಗುವುದೆಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ಮಗು ಯಾರದ್ದು, ಅದನ್ನು ಚರಂಡಿಗೆ ಯಾಕೆ ಎಸೆದು ಹೋಗಿದ್ದಾರೆ ಎಂಬುದರ ಕುರಿತು ಇನ್ನಷ್ಟೇ ತನಿಖೆ ಮಾಡಬೇಕಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.