ಕೊನೆಗೂ ಕನ್ನಡದ ವೀರ ಯೋಧ ಸಂದೀಪ್ ಪಾರ್ಥಿವ ಶರೀರ ತವರಿಗೆ ಆಗಮಿಸಿದೆ. ಯೋಧನ ಸಾವಿಗೆ ಜನ ಕಂಬನಿ ಮಿಡಿದಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತಿದ್ದಕ್ಕೆ  ನಮನ ಸಲ್ಲಿಸಿದರು. ಇಂದು ಹುಟ್ಟೂರು ದೇವಿರಹಳ್ಳೀಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಹಾಸನ(ಫೆ.01): ಕೊನೆಗೂ ಕನ್ನಡದ ವೀರ ಯೋಧ ಸಂದೀಪ್ ಪಾರ್ಥಿವ ಶರೀರ ತವರಿಗೆ ಆಗಮಿಸಿದೆ. ಯೋಧನ ಸಾವಿಗೆ ಜನ ಕಂಬನಿ ಮಿಡಿದಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತಿದ್ದಕ್ಕೆ ನಮನ ಸಲ್ಲಿಸಿದರು. ಇಂದು ಹುಟ್ಟೂರು ದೇವಿರಹಳ್ಳೀಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯೋಧ ಸಂದೀಪ್ ಮನೆಯಲ್ಲಿ ಶೋಕ ಸಾಗರ

ಜಮ್ಮುವಿನಲ್ಲಿ ಜನವರಿ 25ರಂದು ನಡೆದ ಹಿಮಪಾತ ದುರಂತದಲ್ಲಿ ಹುತಾತ್ಮರಾಗಿದ್ದ ಹುತಾತ್ಮ ಯೋಧ ಸಂದೀಪ್ ಪಾರ್ಥಿವ ಶರೀರ ಹಾಸನ ತಲುಪಿದೆ. ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟ ಹುತಾತ್ಮ ಯೋಧನ ಪಾರ್ಥಿವ ಶರೀರ ತಡರಾತ್ರಿ 12.30ರ ಸುಮಾರಿಗೆ ಹಾಸನಕ್ಕೆ ಆಗಮಿಸಿತು.. ತಡರಾತ್ರಿ ಆಗಿದ್ದರಿಂದ ಹುತಾತ್ಮನ ಪಾರ್ಥಿವ ಶರೀರವನ್ನು ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿತ್ತು. ಬೆಳಗ್ಗೆ 8 ಗಂಟೆ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗಣ್ಯರು ಸೇರಿದಂತೆ ಸಾರ್ವಜನಿಕರು ಯೋಧನಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.

ಮಧ್ಯಾಹ್ನ ದೇವಿಹಳ್ಳಿಯಲ್ಲಿ ಅಂತ್ಯಸಂಸ್ಕಾರ

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಹುಟ್ಟೂರು ದೇವಿಹಳ್ಳಿವರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು.. ಸಂದೀಪ್ ಮನೆಯಲ್ಲಿ ಅಂತಿಮ ವಿಧಿವಿಧಾನ ಸಲ್ಲಿಸಿದ ಬಳಿಕ ಹಿಂದೂ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗೊಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ನಿನ್ನೆ ಡೆಲ್ಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಯೋಧನ ಪಾರ್ಥಿವ ಶರೀರ ತರಲಾಯ್ತು.. ಇನ್ನು ರಾಜ್ಯ ಸರ್ಕಾರದ ಪರವಾಗಿ ಸಚಿವ ಎ.ಮಂಜು, ಯೋಧನ ಕುಟುಂಬಕ್ಕೆ ೨೫ ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.. ಅಲ್ದೆ, ಕುಟುಂಬಕ್ಕೆ ಒಂದು ಸೈಟ್ ನೀಡುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಮಧ್ಯಾಹ್ನ ಹುತಾತ್ಮ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ.