ಬ್ಯಾನರ್ಜಿ ಅವರು ಐಷಾರಾಮಿ ವಾಚು, ಪೆನ್ನು, ಮೊಬೈಲ್‌ ಇತ್ಯಾದಿಗಳನ್ನು ಬಳಸುತ್ತಾರೆ ಎಂಬ ಆರೋಪ ಇದ್ದು, ಇದು ಪಕ್ಷದ ಸರಳತೆ, ತತ್ವ-ಆದರ್ಶಗಳಿಗೆ ವಿರುದ್ಧವಾಗಿದೆ. ಹೀಗಾಗಿ ಇವರನ್ನು ಅಮಾನತಿನಲ್ಲಿರಿಸಲಾಗಿದೆ.

ಕೋಲ್ಕತಾ: ಐಷಾರಾಮಿ ಜೀವನ ನಡೆಸುತ್ತಾರೆ ಎಂಬ ಕಾರಣಕ್ಕಾಗಿ ಸಿಪಿಎಂ ಸಂಸದ ರಿತಬ್ರತ ಬ್ಯಾನರ್ಜಿ ಅವರನ್ನು ಪಕ್ಷವು 3 ತಿಂಗಳ ಮಟ್ಟಿಗೆ ಅಮಾನತು ಮಾಡಿದ ಅಪರೂಪದ ಪ್ರಸಂಗ ಶುಕ್ರವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಯಾನರ್ಜಿ ಅವರು ಐಷಾರಾಮಿ ವಾಚು, ಪೆನ್ನು, ಮೊಬೈಲ್‌ ಇತ್ಯಾದಿಗಳನ್ನು ಬಳಸುತ್ತಾರೆ ಎಂಬ ಆರೋಪ ಇದ್ದು, ಇದು ಪಕ್ಷದ ಸರಳತೆ, ತತ್ವ-ಆದರ್ಶಗಳಿಗೆ ವಿರುದ್ಧವಾಗಿದೆ. ಹೀಗಾಗಿ ಇವರನ್ನು ಅಮಾನತಿನಲ್ಲಿರಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಬ್ಯಾನರ್ಜಿ ಅವರು ದುಬಾರಿ ಬೆಲೆಯ ಮಾಂಟ್‌ ಬ್ಲ್ಯಾಂಕ್‌ ಪೆನ್ನು ಹಾಗೂ ಆ್ಯಪಲ್‌ ಸ್ಮಾರ್ಟ್‌ ವಾಚು ಧರಿಸಿದ್ದು ಫೋಟೋವೊಂದರಿಂದ ಬಹಿರಂಗವಾಗಿತ್ತು. ಬಳಿಕ ಪಕ್ಷದ ಕಾರ್ಯಕರ್ತರೊಬ್ಬರು ಸಂಸದನ ವಿರುದ್ಧ ದೂರು ದಾಖಲಿಸಿದ್ದರು.

 ಇಲ್ಲಿ ನಡೆದ ಪಕ್ಷದ ರಾಜ್ಯ ಸಮಿತಿ ಸಭೆಯಲ್ಲಿ ಪಾಲಿಟ್‌ಬ್ಯೂರೋ ಸದಸ್ಯ ಸೂರ್ತಕಾಂತ ಮಿಶ್ರಾ, ಬ್ಯಾನ ರ್ಜಿ ಅಮಾನತು ವಿಷಯ ತಿಳಿಸಿದರು.