ವಿಧ್ವತ್ ಮೇಲೆ ಹಲ್ಲೆ ನಡೆಸಿದ ನಲಪಾಡ್ ಅವರನ್ನು ಮುಂದಿನ 8 ಗಂಟೆ ಒಳಗೆ ಬಂಧಿಸದಿದ್ದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವುದಾಗಿ ಗೃಹಸಚಿವರು ಇಂದು ಮಧ್ಯಾನ ಹೇಳಿದ್ದರು. ರಾತ್ರಿಯಾದರೂ ಆರೋಪಿಯನ್ನು ಪತ್ತೆಹಚ್ಚಲು ವಿಫಲವಾದ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು(ಫೆ.18): ಶಾಂತಿ ನಗರ ಶಾಸಕ ಎನ್'ಎ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ನಡೆಸಿ 23 ಗಂಟೆ ಕಳೆದರೂ ಆತನನ್ನು ಬಂಧಿಸದ ಪೊಲೀಸರ ತಲೆದಂಡವಾಗಿದೆ. ಇನ್ಸ್​​​​​​​​​ಪೆಕ್ಟರ್ ವಿಜಯ್ ಹಡಗಲಿ ಸಸ್ಪೆಂಡ್ ಮಾಡಿ ನಗರ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಸಕ ಹ್ಯಾರಿಸ್ ಮಗನನ್ನು ಹಿಡಿಯಲಾಗದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ CPI ವಿಜಯ್ ಹಡಗಲಿ ಅವರನ್ನು ಅಮಾನತು ಮಾಡಲಾಗಿದ್ದು, ಕಬ್ಬನ್ ಪಾರ್ಕ್ ಉಪವಿಭಾಗದ ACP ಮಂಜುನಾಥ್ ತಳವಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.