ಬೆಂಗಳೂರು [ಜು.07] : ಕಾಂಗ್ರೆಸ್ - ಜೆಡಿಎಸ್  ಮೈತ್ರಿ ಸರ್ಕಾರ ಬಹುತೇಕ ಪತನವಾಗುವ ಹಂತಕ್ಕೆ ಬಂದು ತಲುಪಿದೆ. 14 ಶಾಸಕರು ರಾಜೀನಾಮೆ ನೀಡಿದ್ದು, ತಲೆನೋವು ತಂದಿರಿಸಿದೆ.

ಈ ರಾಜೀನಾಮೆ ಹಿಂದೆ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರು ಮುಖ್ಯ ಪಾತ್ರ ವಹಿಸಿದ್ದಾರೆ ಎನ್ನಲಾಗಿದ್ದು, ಎಚ್.ಡಿ.ಕುಮಾರಸ್ವಾಮಿ ಹಾಗೂ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್  ಅವರಿಗೆ ಟ್ರಬಲ್ ತಂದಿಟ್ಟಿದ್ದಾರೆ. 

ಮಾಜಿ ಸಚಿವ ಸಿಪಿ ಯೋಗೇಶ್ವರ್ ಸಖತ್ ಬ್ಯುಸಿಯಾಗಿದ್ದು, ಕಾಂಗ್ರೆಸ್ - ಜೆಡಿಎಸ್ ಶಾಸಕರ ಸಂಪರ್ಕಗಳಿಸಿ ಸರ್ಕಾರ ಕೆಡುವುವಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.  

ಈ ಬಗ್ಗೆ ಸಿ.ಪಿ.ಯೋಗೇಶ್ವರ್ ಬೆಂಬಲಿಗರಿಂದ ಫೇಸ್ ಬುಕ್ ನಲ್ಲಿ  ಸಂಭ್ರಮ ವ್ಯಕ್ತವಾಗುತ್ತಿದ್ದು,  ಸಿ.ಪಿ.ಯೋಗೇಶ್ವರ್ ತಾಕತ್ತು ದೇಶಕ್ಕೆ ಗೊತ್ತು ಎಂದು ಪೋಸ್ಟ್ ಮಾಡಿದ್ದಾರೆ.  

ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸುವಾಗ ಜೊತೆಯಲ್ಲಿದ್ದ ಯೋಗೇಶ್ವರ್ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ವ ಕ್ಷೇತ್ರದಿಂದಲೇ ಟಾಂಗ್ ಕೊಟ್ಟಿದ್ದಾರೆ.