ಗುವಾಹಟಿ[ಆ.28]: ಮರ ಗಿಡಗಳಿಗೆ ಸಂಗೀತ ಕೇಳಿಸಿದರೆ ಅವು ಹೆಚ್ಚು ಫಲ ಕೊಡುತ್ತವೆ ಎಂಬ ವಾದವಿದೆ. ಅದೇ ರೀತಿ ಕೃಷ್ಣನ ರೀತಿಯಲ್ಲಿ ಕೊಳಲು ಊದಿದರೆ ಹಸುಗಳು ಹೆಚ್ಚು ಹಾಲು ಕೊಡುತ್ತೆ ಎಂದು ಅಸ್ಸಾಂನ ಬಿಜೆಪಿ ಶಾಸಕ ದಿಲೀಪ್‌ ಕುಮಾರ್‌ ಪೌಲ್‌ ಹೇಳಿಕೊಂಡಿದ್ದಾರೆ.

ಸಂಗೀತ ಮತ್ತು ನೃತ್ಯದಿಂದ ಧನಾತ್ಮಕ ಅಂಶಗಳು ಹೊರಹೊಮ್ಮುತ್ತವೆ. ಇದೇ ಕಾರಣಕ್ಕಾಗಿಯೇ ಹಾಲು ಕರೆಯುವ ವೇಳೆ ಶ್ರೀಕೃಷ್ಣನಂತೆ ಕೊಳಲಿನ ಧ್ವನಿ ಕೇಳಿಸಿದರೆ ಹಸುಗಳು ಹೆಚ್ಚಿನ ಹಾಲು ಕೊಡುತ್ತವೆ. ಇದು ಸಂಶೋಧನೆಗಳಿಂದ ಸಾಬೀತಾಗಿದೆ ಎಂದು ದಿಲೀಪ್‌ ಹೇಳಿದ್ದಾರೆ.