ಗೋಮೂತ್ರದಿಂದ ಕ್ಯಾನ್ಸರ್ ಮಾಯ: ರಿಸರ್ಚ್!

Cow urine can cure cancer: Gujarat team
Highlights

ಗೋಮೂತ್ರದಿಂದ ಕ್ಯಾನ್ಸರ್ ಮಾಯ

ಸಾಮಾನ್ಯ ಕ್ಯಾನ್ಸರ್ ಗೆ ಗೋಮೂತ್ರ ರಾಮಬಾಣ

ಜುನಾಗಡ್ ಕೃಷಿ ವಿಶ್ವವಿದ್ಯಾಲಯ ಸಂಶೋಧನೆ

ಅಹಮದಾಬಾದ್(ಜು.3): ಮಾರಕ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ಮದ್ದಾಗಬಲ್ಲದು ಎಂದು ಜುನಾಗಡ್ ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜುನಾಗಡ್ ಕೃಷಿ ವಿವಿ ಸಂಶೋಧನಾ ತಂಡ, ಗೋಮೂತ್ರ ಕ್ಯಾನ್ಸರ್ ರೋಗ ಗುಣಮುಖಕ್ಕೆ ಸಹಾಯ ಮಾಡಬಲ್ಲದು ಎಂದು ಹೇಳಿದ್ದಾರೆ.  ಬಾಯಿಯ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್ ಮುಂತಾದ ಸಾಮಾನ್ಯ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ರಾಮಬಾಣ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಾತನಾಡಿರುವ ಸಂಶೋಧನಾ ತಂಡದ ಮುಖ್ಯಸ್ಥೆ ಶ್ರದ್ಧಾ ಭಟ್, ನಿರಂತರ ಒಂದು ವರ್ಷದಿಂದ ಸಂಶೋಧನೆ ನಡೆಸಿ ಕ್ಯಾನ್ಸರ್ ಗೆ ಗೋಮೂತ್ರ ಮದ್ದು ಎಂಬುದನ್ನು ಕಂಡುಹಿಡಿದಿದ್ದಾಗಿ ತಿಳಿಸಿದ್ದಾರೆ.  ಬಾಟಲ್ ನಲ್ಲಿ ಸಂಗ್ರಹಿಸಿಟ್ಟ ಕ್ಯಾನ್ಸರ್ ಸೆಲ್ ಗಳ ಮೇಲೆ ಅದೇ ಪ್ರಮಾಣದ ಗೋಮೂತ್ರ ಪರೀಕ್ಷೆ ಮಾಡಿದಾಗ ಧನಾತ್ಮಕ ಪರಿಣಾಮ ಬಂದಿದೆ ಎಂದು ಸಂಶೋಧನೆ ತಿಳಿಸಿದೆ.

ಮುಂದಿನ ಹಂತದಲ್ಲಿ ಇಲಿಗಳ ಮೇಲೆ ಈ ಪ್ರಯೋಗ ಮಾಡಿ ಅದು ಯಶಸ್ವಿಯಾದರೆ, ಗೋಮೂತ್ರ ಒಳಗೊಂಡ ಮಾತ್ರೆಗಳನ್ನು ತಯಾರಿಸುವುದಾಗಿ ಸಂಶೋಧನ ತಂಡ ತಿಳಿಸಿದೆ.

loader