ಗೋ ಸಂರಕ್ಷಣಾ ಜಾಗೃತಿಯ ಆಂದೋಲನದ ಪರಿಣಾಮ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಗೋಹತ್ಯೆಯಲ್ಲಿ ಶೇ.50ರಷ್ಟು ಇಳಿಕೆಯಾಗಿದೆ ಎಂದು ರಾಮಚಂದ್ರಾ– ಪುರ ಮಠದ ರಾಘವೇಶ್ವರ ಭಾರತೀ ಶ್ರೀ ತಿಳಿಸಿದ್ದಾರೆ.

ಹುಬ್ಬಳ್ಳಿ: ಗೋ ಸಂರಕ್ಷಣಾ ಜಾಗೃತಿಯ ಆಂದೋಲನದ ಪರಿಣಾಮ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಗೋಹತ್ಯೆಯಲ್ಲಿ ಶೇ.50ರಷ್ಟು ಇಳಿಕೆಯಾಗಿದೆ ಎಂದು ರಾಮಚಂದ್ರಾ– ಪುರ ಮಠದ ರಾಘವೇಶ್ವರ ಭಾರತೀ ಶ್ರೀ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಟ್ಕಳ ಮುಸ್ಲಿಮರ ಹೇಳಿಕೆಯನ್ನು ಆಧರಿಸಿಯೇ ನಾವು ಈ ವಿಷಯ ಹೇಳುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅರ್ಧದಷ್ಟು ಗೋವುಗಳು ವಧಾಲಯಕ್ಕೆ ಸಿಕ್ಕಿಲ್ಲ ಎಂದು ಅವರು ಹೇಳುತ್ತಿದ್ದಾರೆ ಎಂದರು.

ಇನ್ನು ಬೆಂಗಳೂರಿನ ಶಿವಾಜಿನಗರದಲ್ಲಿ ಕಳೆದ ವರ್ಷ 15 ಸಾವಿರ ಗೋವುಗಳನ್ನು ಹತ್ಯೆ ಮಾಡಲಾಗಿತ್ತು. ಅಲ್ಲಿ ಈ ವರ್ಷ ಕೇವಲ ಎರಡೂವರೆ ಸಾವಿರ ಗೋವುಗಳನ್ನು ಮಾತ್ರ ಹತ್ಯೆ ಮಾಡಲಾಗಿದೆ ಎಂದರು.