ಒಂದು ಕಡೆ ಪೆಟ್ರೋಲ್​ ಡೀಸೆಲ್ ದರ ಗಗನಕ್ಕೇರುತ್ತಿದೆ. ಇನ್ನೊಂದೆಡೆ ನಮ್ಮ ರಾಜ್ಯದ ಪೆಟ್ರೊಲ್​ ಬಂಕ್’​ಗಳಲ್ಲಿ  ಅಳತೆಯಲ್ಲಿ ಭಾರೀ ಮೋಸ ಮಾಡಲಾಗುತ್ತಿದೆ. ಆ ಮೂಲಕ ಗ್ರಾಹಕರಿಗೆ ಭರ್ಜರಿ ವಂಚನೆ ಮಾಡಲಾಗುತ್ತಿದೆ. ಈ ವಂಚನಾ ಜಾಲವನ್ನು  ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿ ಬಯಲಿಗೆಳೆದಿದೆ. ನಾನಾ ಕಡೆ ರಹಸ್ಯ ಕಾರ್ಯಾಚರಣೆ ಮಾಡಿ ಪೆಟ್ರೋಲ್​ ಬಂಕ್​ ಮಾಲೀಕರ ಮೋಸದಾಟವನ್ನ ಬಹಿರಂಗಗೊಳಿಸಿದೆ.

ಒಂದು ಕಡೆ ಪೆಟ್ರೋಲ್​ ಡೀಸೆಲ್ ದರ ಗಗನಕ್ಕೇರುತ್ತಿದೆ. ಇನ್ನೊಂದೆಡೆ ನಮ್ಮ ರಾಜ್ಯದ ಪೆಟ್ರೊಲ್​ ಬಂಕ್’​ಗಳಲ್ಲಿ ಅಳತೆಯಲ್ಲಿ ಭಾರೀ ಮೋಸ ಮಾಡಲಾಗುತ್ತಿದೆ. ಆ ಮೂಲಕ ಗ್ರಾಹಕರಿಗೆ ಭರ್ಜರಿ ವಂಚನೆ ಮಾಡಲಾಗುತ್ತಿದೆ. ಈ ವಂಚನಾ ಜಾಲವನ್ನು ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿ ಬಯಲಿಗೆಳೆದಿದೆ. ನಾನಾ ಕಡೆ ರಹಸ್ಯ ಕಾರ್ಯಾಚರಣೆ ಮಾಡಿ ಪೆಟ್ರೋಲ್​ ಬಂಕ್​ ಮಾಲೀಕರ ಮೋಸದಾಟವನ್ನ ಬಹಿರಂಗಗೊಳಿಸಿದೆ.

ಕವರ್​ಸ್ಟೋರಿ ತಂಡ ದೊಡ್ಡ ಬಳ್ಳಾಪುರದ ಮಹಾದೇವಯ್ಯ ಆಂಡ್​ ಕೋ ಪೆಟ್ರೋಲ್​ ಬಂಕ್ ​ನಲ್ಲಿ ನಡೆಸಿದ ರಿಯಾಲಿಟಿ ಚೆಕ್​ ಮಾಡಿದಾಗ, ಒಂದೊಂದು ಬಾರಿ ಒಂದೊಂದು ಅಳತೆ ಕಾಣ ಸಿಕ್ತು. ಆರಂಭದಲ್ಲಿ ನಾವು ಕ್ಯಾನ್​ನಲ್ಲಿ ಪೆಟ್ರೋಲ್​ ಖರೀದಿಸಿ, ಅದನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಅನುಮತಿ ಪಡೆದು ಖರೀದಿಸಿದ ಮಾಪನದಲ್ಲಿ ಅಳತೆ ಮಾಡಿದಾಗ 50 mlಗೂ ಹೆಚ್ಚು ವ್ಯತ್ಯಾಸ ಕಂಡು ಬಂತು.

ಆ ಬಳಿಕ ನೇರವಾಗಿ ಪೆಟ್ರೋಲ್​ ಬಂಕ್​ ಒಳಗೇ ಹೋಗಿ ಅವರದ್ದೇ ಮಾಪನದಲ್ಲಿ ಅಳತೆ ಮಾಡಿದಾಗ್ಲೂ ಭಾರೀ ವ್ಯತ್ಯಾಸ ಕಂಡು ಬಂತು. ಬಳಿಕ ಚರ್ಚೆಗಿಳಿದಾಗ ಮತ್ತೆ ಅಳತೆ ಮಾಡಿ ತೋರಿಸ್ತೀವಿ ಅಂದ್ರು. ಆಗ ಇದ್ದಕ್ಕಿದ್ದ ಹಾಗೆ ಕರೆಂಟ್​ ಬೇರೆ ಹೋಯ್ತು. ಮತ್ತೆ ಚೆಕ್​ ಮಾಡಿದಾಗ ಐದು ಲೀಟರ್​ಗಿಂತಲೂ ಹೆಚ್ಚು ಪೆಟ್ರೋಲ್​ ಹಾಕಿದ್ರು. ಈ ರೀತಿ ಒಮ್ಮೊಮ್ಮೆ ಒಂದೊಂದು ರೀತಿಯ ಅಳತೆ ತೋರಿಸಿದ್ರು. ಇದು ಇಲ್ಲಿ ಅಳತೆಯಲ್ಲಿ ನಡೆಯುತ್ತಿರೋ ಮೋಸಕ್ಕೆ ಹಿಡಿದ ಕನ್ನಡಿಯಾಗಿದೆ.

ದೊಡ್ಡಬಳ್ಳಾಪುರ:

ದೊಡ್ಡಬಳ್ಳಾಪುರದ ಕನ್ನಮಂಗಲದ ಎಸ್​ಎಲ್​ವಿ ಫಿಲ್ಲಿಂಗ್​ ಸ್ಟೇಷನ್​ನಲ್ಲಿ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿದಾಗ ಐದು ಲೀಟರ್​ಗೆ ನೂರು ಎಂ.ಎಲ್​ ವ್ಯತ್ಯಾಸ ಕಂಡು ಬಂತು ಗೊತ್ತಾ? ಆರಂಭದಲ್ಲಿ ಬಂಕ್​ನವರ ಮಾಪನದಲ್ಲಿ ಚೆಕ್​ ಮಾಡಿದ್ವಿ. ಆಗ ವ್ಯತ್ಯಾಸ ಕಂಡು ಬಂತು. ಬಳಿಕ ಕವರ್​ಸ್ಟೋರಿ ತಂಡ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಅನುಮತಿ ಪಡೆದು ಖರೀದಿಸಿದ ಮಾಪನದಲ್ಲಿ ಅಳತೆ ಮಾಡಿದಾಗಲೂ ವ್ಯತ್ಯಾಸ ಕಂಡು ಬಂತು. ಎಷ್ಟು ವ್ಯತ್ಯಾಸ ಇರಬಹುದು ಅಂತ ಚೆಕ್​ ಮಾಡಿದಾಗ ನೂರು ಎಂಎಲ್​ ವ್ಯತ್ಯಾಸ ಕಂಡು ಬಂತು.

ಅಚ್ಚರಿಯಾಯ್ತಾ? ಈ ರೀತಿ ಐದು ಲೀಟರ್​ಗೆ ನೂರು ಎಂಎಲ್​​​ ಖೋತಾ ಆದ್ರೆ ಗ್ರಾಹಕರಿಗಾಗೋ ನಷ್ಟ ಎಷ್ಟು ಆಗುತ್ತೆ ಗೊತ್ತಾ?

ನಷ್ಟದ ಲೆಕ್ಕಾಚಾರ

100ML 6.83 ರೂ

50ML 3.41 ರೂ

30ML 2.00 ರೂ

10ML 0.68 ಪೈಸೆ

ನೆಲಮಂಗಲ:

ನೆಲಮಂಗಲದ ಮಾರುತಿ ಕಿಸಾನ್​ ಪೆಟ್ರೋಲ್​ ಬಂಕ್​ನಲ್ಲಿ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿದಾಗ ವಿಚಿತ್ರ ಅನುಭವವೇ ಆಯ್ತು. ಅಲ್ಲಿನ ಬಂಕ್​ ಸಿಬ್ಬಂದಿ ರಹಸ್ಯ ಕಾರ್ಯಾಚರಣೆ ವೇಳೆ 5 ಲೀಟರ್​​ಗೆ ಅರ್ಧ ಲೀಟರ್​ ವ್ಯತ್ಯಾಸ ಬರುತ್ತೆ ಅಂತ ಹೇಳಿದ್ರು. ಬಳಿಕ ಅಳತೆ ಚೆಕ್​ ಮಾಡಿ ಅಂತ ಕೇಳಿದಾಗ ಯಾವುದೇ ಕಾರಣಕ್ಕೂ ಅಳತೆ ಮಾಡಿ ಕೊಡಲ್ಲ ಅಂತ ದರ್ಪ ಮೆರೆದ್ರು. ನಮ್ಮ ಜೊತೆ ಜಗಳಕ್ಕಿಳಿದ್ರು. ಒತ್ತಾಯದ ಬಳಿಕ ಮಾಪನ ತಂದ್ರು, ಅಳತೆ ಮಾಡಿದಾಗ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂತು.

ಬೆಂಗಳೂರು ನಗರ:

ರಾಜಧಾನಿ ಬೆಂಗಳೂರಿನ ಪೆಟ್ರೋಲ್​ ಬಂಕ್​ಗಳಲ್ಲಿ ಅಳತೆಯಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಾ ಅಂತ ಚೆಕ್​ ಮಾಡಲು ನಮ್ಮ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆಗೆ ಇಳಿಯಿತು. ಆಗ ನಮ್ಮ ಬಲೆಗೆ ಬಿದ್ದ ಮೊದಲ ವಂಚಕ ಬಂಕ್​ ಅಂದ್ರೆ ಮೈಸೂರು ಬ್ಯಾಂಕ್​ನಲ್ಲಿದ್ದ ಇಂಡಿಯನ್ ಆಯಿಲ್​ ಪೆಟ್ರೋಲ್​ ಬಂಕ್​. ಇಲ್ಲಿ ಅಳತೆಯಲ್ಲಿ ಮೋಸ ಮಾತ್ರವಲ್ಲ ಬಂಕ್​ ಸಿಬ್ಬಂದಿ ಸೊಕ್ಕು ಕೂಡಾ ಬಯಲಾಯ್ತು. ಹೇಗೆ ಗ್ರಾಹಕರ ಮೇಲೆ ಬಂಕ್​ ಸಿಬ್ಬಂದಿ ದರ್ಪ ಪ್ರದರ್ಶಿಸುತ್ತಿದ್ದಾರೆ ಅನ್ನೋದು ಗೊತ್ತಾಯ್ತು.

ಬನಶಂಕರಿಯಲ್ಲಿರೋ ಪೆಟ್ರೋಲ್​ ಬಂಕ್​’ನಲ್ಲಂತು ಬಂಕ್​ ಸಿಬ್ಬಂದಿ ದಾರಿ ತಪ್ಪಿಸಲು ಮುಂದಾದ್ರು. ಅಳತೆ ಮಾಡಿ 5 ಲೀಟರ್​ ಪೆಟ್ರೋಲ್​ ಕೊಡಿ ಅಂತ ಕೇಳಿದಾಗ ಅರ್ಧ ಲೀಟರ್​ ಮಾಪನ ತೋರಿಸಿ ನಾವು ಇದರಲ್ಲೇ ಅಳತೆ ಮಾಡೋದು ಅಂದ್ರು. ಆ ಬಳಿಕ ತಮ್ಮಲ್ಲಿ ಐದು ಲೀಟರ್ ಮಾಪನ ಇಲ್ಲಾ ಅಂದ್ರು. ಕೊನೆಗೆ ಕ್ಯಾಮರಾ ಹೊರಗೆ ತಂದಾಗ ಇಂಧನ ಚೆಕ್​ ಮಾಡಿದಾಗ ಆಳತೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂತು.

ಡಬಲ್​ ರೋಡ್​ನಲ್ಲಿರೋ ಭಾರತ್​ ಪೆಟ್ರೋಲ್​ ಬಂಕ್ ಸಿಬ್ಬಂದಿ ಆರಂಭದಲ್ಲಿ ಅಳತೆ ಮಾಡಿ ಕೊಡಲ್ಲ ಎಂದು ದರ್ಪ ತೋರಿದ್ರು. ಮನವಿ ಮಾಡಿದ್ರೆ ಮಾತ್ರ ಅಳತೆ ಮಾಡಿ ಕೊಡ್ತೀವಿ ಅಂದ್ರು. ಯಾವಾಗ ಕ್ಯಾಮರಾ ತೋರಿಸಿದೆವೋ ಆಗ ಅಳತೆ ಮಾಡಲು ಒಪ್ಪಿದ್ರು. ಇಲ್ಲಿ ಒಂದೊಂದು ಗನ್​ನಲ್ಲಿ ಒಂದೊಂದು ಅಳತೆ ಬರಲು ಪ್ರಾರಂಭಿಸಿತು. ಒಂದು ಗನ್​ನಲ್ಲಂತು 40 ml ವ್ಯತ್ಯಾಸ ಕಂಡು ಬಂತು.

ಬೆಂಗಳೂರಿನಲ್ಲಿ ಮತ್ತೊಂದು ವಿಚಿತ್ರ ಅಂಶ ಬಹಿರಂಗವಾಯಿತು. ಅದೇನಂದ್ರೆ ಕೆಲವು ಪೆಟ್ರೋಲ್​ ಬಂಕ್​ಗಳಲ್ಲಿ ಎರಡೆರಡು ಅಳತೆ ಮಾಪನಗಳನ್ನ ಹೊಂದಿವೆ ಎಂದು. ಗ್ರಾಹಕರನ್ನು ವಂಚಿಸಲು ಇವರು ಇಂಥಾ ಟ್ರಿಕ್ಸ್​ ಬಳಸುತ್ತಿದ್ರು. ಇದು ಬಂಬೂ ಬಜಾರ್​ನ ಯುನಿವರ್ಸಲ್​ ಪೆಟ್ರೋಲ್​ ಬಂಕ್​ನಲ್ಲಿ ಕಂಡು ಬಂತು. ಕೆಲವು ಪೆಟ್ರೋಲ್​ ಬಂಕ್​ ಗಳು ಮಾತ್ರ ಪಕ್ಕಾ 5 ಲೀಟರ್​​ ಅಳತೆ ಇಟ್ಟುಕೊಂಡಿದ್ದವು.