ಕೋಳಿ ಖಾದ್ಯ ನಿಮ್ಮ  ಹೃದಯ, ಕಿಡ್ನಿ, ಲಿವರಿಗೆ ಇನ್ನಿಲ್ಲದ ಬೇನೆ ಕೊಡಬಹುದು. ನಾನಾ ಮಾರಣಾಂತಿಕ ಸೋಂಕು ಕಾಯಿಲೆಯಿಂದ ಕಾಡಿಸಿ, ಕಾಡಿಸಿ ಕೊಲ್ಲಬಹದು. ನಮ್ಮ ನಾಡಿನ ಕೋಳಿ ಫಾರಂಗಳಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೀತಿದೆ.

ಕೋಳಿ ಪ್ರಿಯರೇ ಎಚ್ಚರ ! ನೀವು ತಿನ್ನುತ್ತಿರೋ ಕೋಳಿ ನಿಮ್ಮನ್ನ ರೋಗಿಗಳನ್ನಾಗಿಸಬಹುದು. ಅದು ನಿಮ್ಮ ಮೇಲೆ ಯಾವ ಔಷಧಿಯೂ ಪರಿಣಾಮ ಬೀರದಂತೆ ಮಾಡಬಹದು. ಯಾಕಂದ್ರೆ ನಮ್ಮ ಕೋಳಿ ಫಾರಂಗಳಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೀತಿದೆ. ಆ ಬೆಳವಣಿಗೆ ಏನು ಅನ್ನೋದನ್ನ ನಮ್ಮ ಕವರ್​ಸ್ಟೋರಿ ತಂಡ ಅಧ್ಯಯನ ಮಾಡಿ ಪತ್ತೆ ಹಚ್ಚಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

ಯಾಕಂದ್ರೆ ನೀವು ಇಷ್ಟಪಟ್ಟು ಚಪ್ಪರಿಸಿ ಚಪ್ಪರಿಸಿ ತಿನ್ನೋ ಈ ಚಿಕನ್​ ನಿಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನೇ ನಾಶ ಮಾಡುತ್ತಿರಬಹುದು. ನಿಮ್ಮ ಮೇಲೆ ಯಾವುದೇ ಔಷಧಿಯೇ ಕೆಲಸ ಮಾಡದಂತೆ ಮಾಡಬಹುದು. ಕೋಳಿ ಖಾದ್ಯ ನಿಮ್ಮ ಹೃದಯ, ಕಿಡ್ನಿ, ಲಿವರಿಗೆ ಇನ್ನಿಲ್ಲದ ಬೇನೆ ಕೊಡಬಹುದು. ನಾನಾ ಮಾರಣಾಂತಿಕ ಸೋಂಕು ಕಾಯಿಲೆಯಿಂದ ಕಾಡಿಸಿ, ಕಾಡಿಸಿ ಕೊಲ್ಲಬಹದು.

ನಮ್ಮ ನಾಡಿನ ಕೋಳಿ ಫಾರಂಗಳಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೀತಿದೆ. ಅದೇನಂದ್ರೆ ಕಾಯಿಲೆ ವಾಸಿ ಮಾಡಲು ಬಳಸಬೇಕಾದ ರೋಗ ನಿರೋಧಕ ಔಷಧಿಗಳನ್ನ ಕೋಳಿಗಳ ತೂಕ ಹೆಚ್ಚಿಸೋಕೆ ಬಳಸುತ್ತಿದ್ದಾರೆ. ಈ ಕಟುಸತ್ಯವನ್ನ ಕವರ್​ಸ್ಟೋರಿ ತಂಡ ಮಾಡಿದ ರಹಸ್ಯ ಕಾರ್ಯಾಚರಣೆಯಲ್ಲಿ ಕೋಳಿ ಫಾರಂ ಮಾಲೀಕರೇ ಒಪ್ಪಿಕೊಳ್ತಾರೆ.

ಸಸ್ಯಾಹಾರಿಗಳಿಗೂಅಪಾಯವೇ

ಆಹಾರದ ಮೂಲಕ ಆಂಟಿ ಬಯೋಟಿಕ್​ ಅನ್ನ ಕೋಳಿ ತಿನ್ನಿಸೋದ್ರಿಂದ ಸೂಪರ್​ ಬಗ್​ ಸಮಸ್ಯೆ ಕಾಡಬಹುದು. ಯಾವುದೇ ರೋಗಕ್ಕೆ ಔಷಧಿ ಪರಿಣಾಮ ಬೀರದೆ ದೊಡ್ಡ ದುರಂತವೇ ಸಂಭವಿಸಬಹುದು. ಆದ್ರೆ ಇಂಥಾ ಗಭೀರ ಸಮಸ್ಯೆ ಬಗ್ಗೆ ಗಮನಹರಿಸದೆ ನಮ್ಮ ರಾಜ್ಯ ಸರ್ಕಾರ ಯಾವ ಮೌನ ವಹಿಸಿರೋದು ಆತಂಕಕಾರಿ ವಿಚಾರ.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​​