ನುಸುಳುಕೋರರಿಗೆ ರಾಜ್ಯ ಸರ್ಕಾರವೇ ಓಟಿಗಾಗಿ ಓಟರ್ ಐಡಿಯೆಲ್ಲಾ ಮಾಡಿಕೊಡುತ್ತಿದೆ ಅಂತ ವಿರೋಧ ಪಕ್ಷದವರು ನೇರ ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ನುಸುಳುಕೋರರ ವಿರುದ್ಧ ಕ್ರಮಕೈಗೊಳ್ಳಬೇಕಾದ ಪೊಲೀಸರೇ ಅವರಿಂದ ಲಂಚ ಪಡೆದು ರಕ್ಷಣೆ ನೀಡುತ್ತಿದ್ದಾರೆ.
ಬೆಂಗಳೂರು(ಜು.21): ಸಿಲಿಕಾನ್ ಸಿಟಿ ನಾಗರಿಕರೆ ಎಚ್ಚರ ನಿಮಗೆ ಕಾದಿದೆ ಭಾರೀ ಅಪಾಯ. ಯಾಕಂದರೆ ಬೆಂಗಳೂರಲ್ಲಿ ಬಾಂಗ್ಲಾ ಬಾಂಬ್ ಸ್ಫೋಟಕ್ಕೆ ಸಿದ್ಧವಾಗಿದೆ. 4 ಲಕ್ಷಕ್ಕೂ ಹೆಚ್ಚು ಬಾಂಗ್ಲಾ ನುಸುಳುಕೋರರು ನಮ್ಮ ನಾಡಿನ ನೆಮ್ಮದಿಗೆ ಕುತ್ತು ತರಲು ರೆಡಿಯಾಗಿದ್ದಾರೆ.
ನಮ್ಮ ರಾಜಧಾನಿಯಲ್ಲಿ 4 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರಿರುವುದು ಆತಂಕಕಾರಿ ವಿಚಾರ ಕವರ್ಸ್ಟೋರಿ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಈ ನುಸುಳುಕೋರರು ಗಡಿಯಲ್ಲಿ ಬಿಎಸ್ಎಫ್ ಯೋಧರಿಗೆ ಲಂಚ ಕೊಟ್ಟು ಭಾರತ ಪ್ರವೇಶಿಸುರುವುದು ಇನ್ನೊಂದು ಶಾಕಿಂಗ್ ವಿಷಯ. ಹೀಗೆ ಅಕ್ರಮವಾಗಿ ಗಡಿ ದಾಟಿ ಬಂದ ಬಾಂಗ್ಲಾ ವಾಸಿಗಳು ಕಾನೂನುಬಾಹಿರವಾಗಿ ಲಂಚ ಕೊಟ್ಟು ಆಧಾರ್ ಕಾರ್ಡ್, ಪಾನ್ ಕಾರ್ಡ್, ಓಟರ್ ಐಡಿಯೆಲ್ಲಾ ಮಾಡಿಕೊಂಡಿದ್ದಾರೆ.
ನುಸುಳುಕೋರರಿಗೆ ರಾಜ್ಯ ಸರ್ಕಾರವೇ ಓಟಿಗಾಗಿ ಓಟರ್ ಐಡಿಯೆಲ್ಲಾ ಮಾಡಿಕೊಡುತ್ತಿದೆ ಅಂತ ವಿರೋಧ ಪಕ್ಷದವರು ನೇರ ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ನುಸುಳುಕೋರರ ವಿರುದ್ಧ ಕ್ರಮಕೈಗೊಳ್ಳಬೇಕಾದ ಪೊಲೀಸರೇ ಅವರಿಂದ ಲಂಚ ಪಡೆದು ರಕ್ಷಣೆ ನೀಡುತ್ತಿದ್ದಾರೆ. ಇವರೆಲ್ಲ ನಮ್ಮ ನೆಲದಲ್ಲಿ ಮಿನಿ ಬಾಂಗ್ಲಾದೇಶ ಸೃಷ್ಟಿಸಿಕೊಂಡು ನಾನಾ ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ. ಸ್ಲೀಪರ್ ಸೆಲ್ಗಳ ರೀತಿ ಕೆಲಸ ಮಾಡ್ತಿದ್ದಾರೆ. ನಮ್ಮ ಆಂತರಿಕ ಭದ್ರತೆಗೆ ಪೆಟ್ಟು ಕೊಟ್ಟಿದ್ದಲ್ಲದೆ, ಆರ್ಥಿಕ ಭದ್ರತೆಗೂ ಆತಂಕವೊಡ್ಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳದೆ ರಾಜ್ಯ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ.
ವರದಿ: ವಿಜಯಲಕ್ಷ್ಮಿ ಶಿಬರೂರು
