ದಾವಣಗೆರೆ (ಅ.24): ರೈತರಿಗೆ ಪರಿಹಾರ ನೀಡದ ರೈಲ್ವೆ ಇಲಾಖೆಗೆ ಸ್ಥಳೀಯ ನ್ಯಾಯಾಲಯವು ಬಿಸಿ ಮುಟ್ಟಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ.     

ಹರಿಹರ-ಕೊಟ್ಟೂರು ರೈಲ್ವೆ ಮಾರ್ಗಕ್ಕೆ ರೈತರು  ಭೂಮಿ ನೀಡಿದ್ದು, ರೈಲ್ವೆ ಇಲಾಖೆ ರೈತರಿಗೆ 37 ಲಕ್ಷ ರೂಪಾಯಿ ನೀಡಬೇಕಿತ್ತು. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ಹಣ ಪಾವತಿಸಲಿರಲಿಲ್ಲ.

ರೈಲ್ವೇ ಇಲಾಖೆಯ ವಿಳಂಬ ನಿತಿಯಿಂದ ಬೇಸತ್ತ ರೈತರು ಕೋರ್ಟ್ ಮೊರೆ ಹೋಗಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಹರಿಹರ ಪ್ರಧಾನ ಸಿವಿಲ್ ಕೋರ್ಟ್ ರೈಲು ಜಪ್ತಿಗೆ ಆದೇಶ  ನೀಡಿದೆ. ಬಳಿಕ ಕೋರ್ಟ್ ಸಿಬ್ಬಂದಿ  ಧಾರವಾಡ - ಮೈಸೂರು ಇಂಟರ್ ಸಿಟಿ ರೈಲನ್ನು ಜಪ್ತಿ  ಮಾಡಿದ್ದಾರೆ. ಕೋರ್ಟ್ ಕ್ರಮದಿಂದ, ರೈಲು ಸುಮಾರು ಹೊತ್ತು ಹರಿಹರ ನಿಲ್ದಾಣದಲ್ಲೇ ನಿಲ್ಲುವಂತಾಯಿತಲ್ಲದೇ, ಪ್ರಯಾಣಿಕರು ಪರದಾಡಬೇಕಾಯಿತು.