ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿ ವಿರುದ್ಧ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಪಟೇಲ್'ರಾಗಿದ್ದ ಕೆಂಡೆಗೌಡ ಎಂಬುವರ ಪುತ್ರ ಪಾರ್ಥಸಾರಥಿ ಕೋರ್ಟ್ ಮೋರೆ ಹೋಗಿದ್ದರು.

ಮಂಡ್ಯ(ಫೆ.17): ಪಟೇಲ್ ಹುದ್ದೆಯ ಗೌರವಧನ ಪಾವತಿಸದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಾರು ಹಾಗೂ ಮದ್ದೂರು ತಹಶೀಲ್ದಾರ್ ಕಚೇರಿ ಸಾಮಾಗ್ರಿ ಜಪ್ತಿಗೆ ಮಂಡ್ಯದ 1ನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ. 1989ರಲ್ಲಿ ಸರ್ಕಾರ ಪಟೇಲ್ ಹುದ್ದೆಯನ್ನು ರದ್ದುಗೊಳಿಸಿತ್ತು. ಹುದ್ದೆ ರದ್ದಾದ ನಂತರ ನೀಡಬೇಕಿದ್ದ ಗೌರವ ಧನ‌ ನೀಡಿರಲಿಲ್ಲ. ಗೌರವಧನ ಸತಾಯಿಸಿದ್ದ ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿ ವಿರುದ್ಧ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಪಟೇಲ್'ರಾಗಿದ್ದ ಕೆಂಡೆಗೌಡ ಎಂಬುವರ ಪುತ್ರ ಪಾರ್ಥಸಾರಥಿ ಕೋರ್ಟ್ ಮೋರೆ ಹೋಗಿದ್ದರು.ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಜಪ್ತಿಗೆ ಆದೇಶ ನೀಡಿದೆ.