ಅಹಮದಾಬಾದ್[ಜೂ.23] ಕೆಲಸ ಮಾಡುತ್ತಿದ್ದ ಪ್ಲೈವುಡ್ ಘಟಕದಿಂದ ಹೊರಹಾಕಿದರು ಎಂದು ಇಬ್ಬರು ಸಲಿಂಗಿ ಮಹಿಳೆಯರು ಸಾಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೂನ್ 11 ರಂದೆ ದುರ್ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಅವರು ಕೆಲಸ ಕಳೆದುಕೊಳ್ಳಲು ಅವರ ಲೈಂಗಿಕ ವಾಂಛೆಗಳೆ ಕಾರಣ ಎಂದು ಹೇಳಲಾಗಿದೆ.

ಈ ಪ್ರಪಂಚ ಬದುಕಿದ್ದಾಗ ನಮ್ಮನ್ನು ಒಂದಾಗಲು ಬಿಡಲಿಲ್ಲ. ಸಾವಿನಲ್ಲಿ ನಮ್ಮನ್ನು ಯಾರೂ ಬೇರೆ ಮಾಡಲು ಸಾಧ್ಯವಿಲ್ಲ ಎಂದು ಕೆಂಪು ಲಿಪ್ ಸ್ಟಿಕ್ ನಲ್ಲಿ ಬರೆದ ಪತ್ರವೂ ಸ್ಥಳದಲ್ಲಿ ಸಿಕ್ಕಿದೆ.  ಆಶಾ ಠಾಕೂರ್ ಮತ್ತು ಭಾವನಾ ಠಾಕೂರ್ ಎಂಬ ಸಲಿಂಗಿ ಯುವತಿಯರನ್ನು ಅವರು ಕೆಲಸ ಮಾಡುತ್ತಿದ್ದ ಜಾಗದಿಂದ ಹೊರ ಹಾಕಲಾಗಿತ್ತು. 

ಉಳಿದ ಕೆಲಸಗಾರರು ಇವರು ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದು ವಾತಾವರಣ ಹಾಳಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಇಬ್ಬರು ಮಹಿಳೆಯರ ಗಂಡಂದಿರನ್ನು ಪೊಲೀಸರು ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ.