ಚಲಿಸುತ್ತಿರುವ ರೈಲಿನಲ್ಲಿಯೇ ನಡೆಯಿತು ವಿವಾಹ

Couple ties knot on board Train Wedding solemnised by Sri Sri Ravi Shankar
Highlights

ಚಲಿಸುತ್ತಿರುವ ರೈಲಿನಲ್ಲಿಯೇ ವಿವಾಹವಾಗಿರುವ ವಿಶೇಷ ಪ್ರಸಂಗವೊಂದು ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಲಖನೌ ನಡುವೆ ನಡೆದಿದೆ. ವಿಶೇಷ ಎಂದರೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ.

ನವದೆಹಲಿ: ಚಲಿಸುತ್ತಿರುವ ರೈಲಿನಲ್ಲಿಯೇ ವಿವಾಹವಾಗಿರುವ ವಿಶೇಷ ಪ್ರಸಂಗವೊಂದು ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಲಖನೌ ನಡುವೆ ನಡೆದಿದೆ. ವಿಶೇಷ ಎಂದರೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ.

ಫಾರ್ಮಾಸಿಸ್ಟ್ ಸಚಿನ್ ಕುಮಾರ್ ಮತ್ತು ತೆರಿಗೆ ಇಲಾಖೆ ಉದ್ಯೋಗಿ ಜ್ಯೋತ್ಸ್ನಾ ಸಿಂಗ್ ಪಟೇಲ್ ಚಲಿಸುತ್ತಿರುವ ರೈಲಿನಲ್ಲಿಯೇ ಬುಧವಾರ ಸರಳ ವಿವಾಹವಾದರು. ‘ಇತಿಹಾಸದಲ್ಲಿಯೇ  ಮೊದಲ ಬಾರಿಗೆ ಚಲಿಸುತ್ತಿರುವ ರೈಲಿನಲ್ಲಿ ಸರಳ ವಿವಾಹವಾಗಿದೆ.

ಎಲ್ಲರಿಗೂ ಈ ಸಂದೇಶವನ್ನು ತಿಳಿಸಲು ನಾನು ಇಷ್ಟ ಪಡುತ್ತೇನೆ’ ಎಂದು ಟ್ವೀಟ್ ಮಾಡಿರುವ  ರವಿಶಂಕರ್ ಗುರೂಜಿ, ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ಯಾಗ್ ಕೂಡ ಮಾಡಿದ್ದಾರೆ. ಆದರೆ ರವಿಶಂಕರ್ ಗುರೂಜಿಯನ್ನು ವಿವಾಹಕ್ಕೆ ಆಹ್ವಾನಿಸಲಾಗಿತ್ತೇ ಅಥವಾ ಪ್ರಯಾಣದ ವೇಳೆ ಸರಳ ವಿವಾಹಕ್ಕೆ ಸಾಕ್ಷಿಯಾಗಿದ್ದರೇ ಎಂಬುದು ತಿಳಿದುಬಂದಿಲ್ಲ.

loader