ಟೆಕ್ಸಾಸ್(ಅಮೇರಿಕಾ)ನ.12): ಪ್ರೀತಿ ಎಲ್ಲಿ, ಯಾವಾಗ ಹುಟ್ಟುತ್ತೆ ಅನ್ನೋದು ಹೇಳಲು ಸಾಧ್ಯವಿಲ್ಲ. ಪ್ರೀತಿಗೆ ಕಾರಣಗಳು ಬೇಕಿಲ್ಲ. ಮೊದಲ ನೋಟದಲ್ಲಿ ಪ್ರೀತಿ ಉಕ್ಕಿ, ಎರಡನೇ ಭೇಟಿಯಲ್ಲಿ ಮದುವೆಯಾದ ಊದಾಹರಣೆಗಳು ಸಾಕಷ್ಟಿವೆ. ಇದೀಗ ವಿಮಾನದಲ್ಲಿ ಮೊದಲ ಭೇಟಿಯಾಗಿ, ವರ್ಷಗಳ ಬಳಿಕ ಅದೇ ವಿಮಾನದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡ ಘಟನೆ ಸೌತ್ ವೆಸ್ಟ್‌ ಏರ್‌ಲೈನ್ಸ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ಬಾಯ್‌ಫ್ರೆಂಡ್‌ ಜೊತೆ ಸೀಕ್ರೆಟ್ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ನಟಿ?

ಟೆಕ್ಸಾಸ್‌ನ ಬೇಸ್‌ಬಾಲ್ ಆಟಗಾರ ಮೈಕಲ್ ಡೇವಿಸ್ ಹಾಗೂ ಮಾಡೆಲ್ ಕ್ಯಾಥಲಿನ್ ಜೋನ್ಸ್ ಸಂಭ್ರಮಕ್ಕೆ ಪಾರವೇ ಇಲ್ಲ. ಪರಿಚಯ, ಪ್ರೀತಿಯಾಗಿ, ಇದೀಗ ಪ್ರಪೋಸ್ ಸಕ್ಸಸ್ ಆಗಿದೆ. ಇಷ್ಟೇ ಅಲ್ಲ ರಿಂಗ್ ತೊಡಿಸಿ ನಿಶ್ಚಿತಾರ್ಥ್ ಕೂಡ ಆಗಿದೆ. ಡೇವಿಸ್ ಹಾಗೂ ಜೋನ್ಸ್ ಪ್ರೀತಿ ಹಾದಿ ಯಾವ ಬಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲ.

ಡೇವಿಸ್ ಹಾಗೂ ಜೋನ್ಸ್ ಎಂದಿನಂತೆ ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದರು. ಮುಂಜಾನೆ 5 ಗಂಟೆಗೆ ಡೇವಿಸ್ ಬೇಸ್‌ಬಾಲ್ ಟೂರ್ನಮೆಂಟ್‌ಗಾಗಿ ಸೌತ್ ವೆಸ್ಟ್ ಏರ್‌ಲೈನ್ಸ್ ವಿಮಾನ ಏರಿದ್ದರು. ಇತ್ತ ಟೂರಿಸಂ ಟ್ರಾವೆಲ್ ಕುರಿತ ಶೂಟಿಂಗ್‌ಗಾಗಿ ಜೋನ್ಸ್ ಟೆಕ್ಸಾಸ್‌ ಏರ್‌ಪೋರ್ಟ್‌ನಲ್ಲಿ ಅದೇ ವಿಮಾನ ಏರಿದ್ದರು. ಜೋನ್ಸ್ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಮಂದಾದಾಗ, ಮತ್ತೊಂದು ಬದಿಯಲ್ಲಿ ಹ್ಯಾಂಡ್ಸಮ್ ಯುವಕ ಕುಳಿತಿರುವುದನ್ನು ಗಮನಿಸಿದ್ದಾರೆ.

ಇದನ್ನೂ ಓದಿ: ಉಂಗುರ ಧರಿಸುವ ಬೆರಳ ಅರ್ಥವೆನು ?

ಮೊದಲ ನೋಟದಲ್ಲಿ ಮೈಕಲ್ ಡೇವಿಸ್ , ಜೋನ್ಸ್ ಮನಸ್ಸಿನಲ್ಲಿ ಬೇರೂರಿದ್ದರು.  ಡೇವಿಸ್ ಸನಿಹ ಸಾಲು ಖಾಲಿಯಾಗಿತ್ತು. ಹೀಗಾಗಿ ಜೋನ್ಸ್ ನೇರವಾಗಿ ಡೇವಿಸ್ ಸನಿಹದಲ್ಲಿ ಸಾಲಿನಲ್ಲಿ ಕುಳಿತು ಪರಿಚಯ ಮಾಡಿಕೊಂಡಿದ್ದಾಳೆ. ಟೆಕ್ಸಾಸ್‌ನಿಂದ ವಿಮಾನ ಹಾರಾಟ ಶುರುವಾದಾಗ ಇವರಿಬ್ಬರು ಪರಸ್ಪರ ವಿಚಾರ ವಿನಿಯಮ ಆರಂಭಿಸಿದ್ದಾರೆ. ಮೊದಲಲ ಭೇಟಿಯಲ್ಲೇ ಇವರಿಬ್ಬರಿಗೂ ಪ್ರೀತಿ ಹುಟ್ಟಿದೆ.

ವಿಮಾನದಿಂದ ಇಳಿದ ಮಾಡೆಲ್ ಜೋನ್ಸ್, ನೇರವಾಗಿ ಪೋಷಕರಿಗೆ ಕರೆ ಮಾಡಿ, ನಾನಿಂದ ನನ್ನ ಭಾವಿ ಪತಿಯನ್ನು ಭೇಟಿಯಾದೆ ಎಂದು ಹೇಳಿದ್ದಾರೆ. ಜೋನ್ಸ್ ಮಾತಿಗೆ ಕುಟುಂಬದವರು ನಕ್ಕು ಸುಮ್ಮನಾಗಿದ್ದಾರೆ. ಮೊದಲ ಭೇಟಿಯಲ್ಲಿ ಫೋನ್ ನಂಬರ್ ವಿನಿಮಯವಾಗಿದೆ. ಬಳಿಕ  ಇವರಿಬ್ಬರು ಹಲವು ಭಾರಿ ಭೇಟಿಯಾಗಿದ್ದಾರೆ. ಜೊತೆಯಾಗಿ ತಮ್ಮ ತಮ್ಮ ವೃತ್ತಿಗಾಗಿ ಪ್ರಯಾಣಿಸಿದ್ದಾರೆ. ಆದರೆ ಒಬ್ಬರಿಗೊಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಂಡಿಲ್ಲ.

ಸರಿಯಾಗಿ ಒಂದು ವರ್ಷಕ್ಕೆ ಡೇವಿಸ್ ತನ್ನ ಪ್ರೀತಿಯನ್ನು ಹೇಳಲು ಬಯಸಿದ್ದ. ಇದಕ್ಕಾಗಿ ಮಾಸ್ಟರ್ ಪ್ಲಾನ್ ರೆಡಿ ಮಾಡಿದ. ತಾವು ಮೊದಲು ಭೇಟಿಯಾದ ಸೌತ್ ವೆಸ್ಟ್ ಏರ್‌ಲೈನ್ಸ್ ಸಂಪೂರ್ಣ ಬುಕ್ ಮಾಡಿದ್ದ. ಅದೇ ದಿನ ಜೋನ್ಸ್‌ಗೆ ಶೂಟಿಂಗ್ ತೆರಳಬೇಕಿತ್ತು. ಇತ್ತ ಡೇವಿಸ್ ತಾನು ಕೂಡ ಪ್ರಯಾಣ ಮಾಡುವುದಿದೆ, ಸೌತ್ ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲೇ ಟಿಕೆಟ್ ಬುಕ್ ಮಾಡಿಸಿದ್ದಾನೆ. \

 

 
 
 
 
 
 
 
 
 
 
 
 
 

baseball season is over and my guy is headed back to TEXAS!!!! 🤠

A post shared by Cathlyn Jones (@cathlynjones) on Aug 29, 2019 at 6:57pm PDT

ಜೋನ್ಸ್ ಬರುವಿಕೆಗಾಗಿ ಸೌತ್ ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಕಾದಿದ್ದಾನೆ. ಇತ್ತ  ಡೇವಿಸ್ ತಂದೆ ತಾಯಿ ಹಾಗೂ ಕುಟುಂದವರು ವಿಮಾನದಲ್ಲಿ ಹಾಜರಿದ್ದರು. ಜೋನ್ಸ್ ವಿಮಾನದೊಳಗೆ ಪ್ರವೇಶಿಸಿದ  ಬಳಿಕ ವಿಮಾನ ಹಾರಾಟ ಶುರುಮಾಡಿದೆ. ಆಗಸಕ್ಕೇರಿದ ಬೆನ್ನಲ್ಲೇ ಡೇವಿಸ್ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾನೆ. ಮೊದಲ ದಿನವೇ ಡೇವಿಲ್ ನನ್ನ ಪತ್ನಿ ಎಂದು ಜೋನ್ಸ್ ಸ್ವೀಕರಿಸಿದ್ದಳು. ಇನ್ನು ಪ್ರೇಮ ನಿವೇದನೆ ಮಾಡಿದಾಗ ಆನಂದಬಾಷ್ಪ ಸುರಿದಿತ್ತು. ಡೇವಿಸ್ ಬಿಗಿದಪ್ಪಿದ್ದಾಳೆ. ಮರುಕ್ಷಣ ಡೇವಿಸ್ ರಿಂಗ್ ತೊಡಿಸಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾನೆ. ಮೊದಲ ಭೇಟಿಯಾಗಿ ವರ್ಷದಲ್ಲೇ ಇವರಿಬ್ಬರ ಪ್ರೀತಿ ಹೊಸ ಅರ್ಥ ಪಡೆದಿದೆ.