ಛೀ..ನಡುರಸ್ತೆಯಲ್ಲಿ ಇದೆಂತಾ ಪೋಲಿ ಆಟ?: ವಿಡಿಯೋ ವೈರಲ್..!

Couple found having sex in public, woman held
Highlights

ಸಾರ್ವಜನಿಕ ಸ್ಥಳದಲ್ಲೇ ಜೋಡಿಯಿಂದ ಬಹಿರಂಗವಾಗಿ ಲೈಂಗಿಕ ಕ್ರಿಯೆ 

ಮುಂಬೈನ ಮರೀನ್ ಡ್ರೈವ್​ ಪ್ರದೇಶದ ನಾರಿಮನ್​ ಕೇಂದ್ರದ ಬಳಿ ಘಟನೆ

ಲೈಂಗಿಕ ಕ್ರಿಯೆ ನಡೆಸಿ ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾದ ಜೋಡಿ

ಪೊಲೀಸರನ್ನು ಕಂಡೊಡನೆ ಪರಾರಿಯಾದ ಭೂಪ

ಮಹಿಳೆಯನ್ನು ಬಂಧಿಸಿದ ಪೊಲೀಸರು

ಮುಂಬೈ(ಜೂ.10): ಸಾರ್ವಜನಿಕ ಸ್ಥಳದಲ್ಲೇ ಜೋಡಿಯೊಂದು ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮರೀನ್ ಡ್ರೈವ್​ ಪ್ರದೇಶದ ನಾರಿಮನ್​ ಕೇಂದ್ರದ ಬಳಿಯಿರುವ ರಸ್ತೆ ವಿಭಜಕದ ಮೇಲೆ ಹಾಡಹಗಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಜೋಡಿಯೊಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಿದ್ದರೂ ಅದನ್ನು ಲೆಕ್ಕಿಸದೇ ಮನಬಂದಂತೆ ವರ್ತಿಸುತ್ತಿದ್ದ ಯುವ ಜೋಡಿಯನ್ನು ಕಂಡು ಮುಜಗರಕ್ಕೀಡಾದ ಸಾರ್ವಜನಿಕರು ಸ್ಥಳೀಯ ಮರೀನ್ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿದ್ದ ನೂರಾರು ಮಂದಿ ಈ ಕೃತ್ಯದ ಫೋಟೋ ಮತ್ತು ವಿಡಿಯೋ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮೊದಲು ಮಹಿಳೆಯನ್ನು ಹಿಡಿದಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪುರುಷ ಪರಾರಿಯಾಗಿದ್ದಾನೆ. ಸದ್ಯ ಮಹಿಳೆಯನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆಕೆಯ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

loader