ಮಲೆಕುಡಿಯರ ಪೂಣಚ್ಚ ಎಂಬ ಈ ದಂಪತಿ ಮನೆ ಕಳೆದುಕೊಂಡಿವವರಿಗೆ ನಮ್ಮ ಆಸ್ತಿಯಲ್ಲಿ ಎರಡು ಎಕರೆ ಜಾಗವನ್ನು ದಾನವಾಗಿ ನೀಡಲು ಒಪ್ಪಿಕೊಂಡಿದ್ದೇನೆ. ಈ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. 

ಮಡಿಕೇರಿ : ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಯವಕಪಾಡಿಯ ಗಿರಿಜನ ದಂಪತಿ ತಮಗಿರುವ ಮೂರು ಎಕರೆ ಜಾಗದಲ್ಲಿ ಎರಡು ಎಕರೆಯನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಮಲೆಕುಡಿಯರ ಪೂಣಚ್ಚ ಎಂಬವರು ಮನೆ ಕಳೆದುಕೊಂಡಿವವರಿಗೆ ನಮ್ಮ ಆಸ್ತಿಯಲ್ಲಿ ಎರಡು ಎಕರೆ ಜಾಗವನ್ನು ದಾನವಾಗಿ ನೀಡಲು ಒಪ್ಪಿಕೊಂಡಿದ್ದೇನೆ. ಇರುವ ಮೂರು ಎಕರೆಯಲ್ಲಿ ಎರಡು ಎಕರೆ ಜಾಗವನ್ನು ದಾನವಾಗಿ ನೀಡುತ್ತೇನೆ. 

ಅದರಲ್ಲಿ ಯಾವುದೇ ಎರಡು ಮಾತಿಲ್ಲ. ನಮಗೆ ಹಲವು ವರ್ಷಗಳಿಂದ ಮಕ್ಕಳಿಲ್ಲ. ಯಾರಾದರು ತಂದೆ-ತಾಯಿಯನ್ನು ಕಳೆದುಕೊಂಡಿರುವವರು ಸಣ್ಣ ಮಕ್ಕಳಿದ್ದರೆ ನಾವು ದತ್ತು ತೆಗೆದುಕೊಂಡು ಅವರನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತೇನೆ ಎಂದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ದಂಪತಿಯ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.