ಭಾರತ-ಪಾಕ್ ಗಡಿಯಿಂದ 323 ಮೀಟರ್ ಎತ್ತರದಲ್ಲಿರುವ ಅತೀ ಎತ್ತರದ ಪ್ರದೇಶ ಅತ್ತಾರಿಯಲ್ಲಿ ನಿನ್ನೆ ಭಾರತದ ತ್ರಿವರ್ಣ ಧ್ವಜವನ್ನು ಸ್ಥಾಪಿಸಲಾಯಿತು. ಬೇಸ್ ಯಿಂದ 355 ಅಡಿ ಎತ್ತರದಲ್ಲಿ ಧ್ವಜವನ್ನು ಹಾರಿಸಲಾಗಿದೆ. 10 ಅಡಿ ಎತ್ತರದಷ್ಟು ವಾಯುಯಾನ ಬೆಳಕಿನ  ದೀಪಗಳನ್ನು ಹಾಕಲಾಗಿದ್ದು ಒಟ್ಟು 365 ಅಡಿ ಎತ್ತರದ ಸ್ಥಂಬವಾಗಿದೆ. ಈ ಧ್ವಜವು ಲಾಹೋರ್ ನಿಂದ ನೋಡಿದರೆ ಕಾಣಿಸುತ್ತದೆ.

ನವದೆಹಲಿ (ಮಾ.06): ಭಾರತ-ಪಾಕ್ ಗಡಿಯಿಂದ 323 ಮೀಟರ್ ಎತ್ತರದಲ್ಲಿರುವ ಅತೀ ಎತ್ತರದ ಪ್ರದೇಶ ಅತ್ತಾರಿಯಲ್ಲಿ ನಿನ್ನೆ ಭಾರತದ ತ್ರಿವರ್ಣ ಧ್ವಜವನ್ನು ಸ್ಥಾಪಿಸಲಾಯಿತು. ಬೇಸ್ ಯಿಂದ 355 ಅಡಿ ಎತ್ತರದಲ್ಲಿ ಧ್ವಜವನ್ನು ಹಾರಿಸಲಾಗಿದೆ. 10 ಅಡಿ ಎತ್ತರದಷ್ಟು ವಾಯುಯಾನ ಬೆಳಕಿನ ದೀಪಗಳನ್ನು ಹಾಕಲಾಗಿದ್ದು ಒಟ್ಟು 365 ಅಡಿ ಎತ್ತರದ ಸ್ಥಂಬವಾಗಿದೆ. ಈ ಧ್ವಜವು ಲಾಹೋರ್ ನಿಂದ ನೋಡಿದರೆ ಕಾಣಿಸುತ್ತದೆ.

ಇದಕ್ಕೂ ಮುನ್ನ ರಾಂಚಿಯಲ್ಲಿರುವ 300 ಅಡಿಗಳಷ್ಟು ಎತ್ತರದಲ್ಲಿರುವ ರಾಷ್ಟ್ರಧ್ವಜವು ಅತೀ ಎತ್ತರದ್ದಾಗಿತ್ತು.

ಈ ಧ್ವಜವು 80/120 ಅಡಿಗಳಷ್ಟಿದ್ದು, 125 ಕೆಜಿ ಭಾರವಿದೆ. ಪ್ಯಾರಾಚೂಟ್ ಲೋಹದಿಂದ ತಯಾರಿಸಲಾಗಿದೆ. ಅನಿಲ್ ಜೋಷಿ ನೇತೃತ್ವದ ಸ್ಥಳೀಯ ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಮೃತ್ ಸರ್ ಇಂಪ್ರೂವ್ ಮೆಂಟ್ ಟ್ರಸ್ಟ್ ಈ ಧ್ವಜವನ್ನು ತಯಾರಿಸಿದೆ.

ಒಂದುವೇಳೆ ಈ ಧ್ವಜ ಸ್ಥಂಭವು ಪ್ರಕೃತಿ ವಿಕೋಪದಿಂದ ಹಾನಿಯಾದರೆ ಪರ್ಯಾಯವಾಗಿ ಒಟ್ಟು 6 ಸ್ಥಂಭವನ್ನು ತಯಾರು ಮಾಡಲಾಗಿದೆ. ಪ್ರತಿ ಧ್ವಜಕ್ಕೆ ತಗುಲಿದ ವೆಚ್ಚ 1.25 ಲಕ್ಷ. ಒಟ್ಟು ಇಡೀ ಯೋಜನೆಗೆ ರಾಜ್ಯ ಸರ್ಕಾರಕ್ಕೆ ತಗುಲಿದ ವೆಚ್ಚ 3.5 ಕೋಟಿ ರೂಗಳು.