Asianet Suvarna News Asianet Suvarna News

ಸಭಾಪತಿ ಸ್ಥಾನ ಕಾಂಗ್ರೆಸ್ ಪಾಲಿಗೋ - ಜೆಡಿಎಸ್ ಪಾಲಿಗೋ

ಬಜೆಟ್ ಅಧಿವೇಶನ ಮುಕ್ತಾಯಕ್ಕೂ ಮೊದಲು ವಿಧಾನಪರಿಷತ್ ಸಭಾಪತಿ ನೇಮಕ ಮಾಡಬೇಕು ಎಂಬ ಅನಿವಾರ್ಯ ತೆಯಲ್ಲಿರುವ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಲ್ಲಿ ಯಾವ ಪಕ್ಷ ಸಭಾಪತಿ ಸ್ಥಾನ ಪಡೆಯಬೇಕು ಎಂಬ ಬಗ್ಗೆ ಒಮ್ಮತ ಮೂಡಿಲ್ಲ.

Council chairman post for JDS Or Congress..?

ಬೆಂಗಳೂರು :  ಬಜೆಟ್ ಅಧಿವೇಶನ ಮುಕ್ತಾಯಕ್ಕೂ ಮೊದಲು ವಿಧಾನಪರಿಷತ್ ಸಭಾಪತಿ ನೇಮಕ ಮಾಡಬೇಕು ಎಂಬ ಅನಿವಾರ್ಯ ತೆಯಲ್ಲಿರುವ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಲ್ಲಿ ಯಾವ ಪಕ್ಷ ಸಭಾಪತಿ ಸ್ಥಾನ ಪಡೆಯಬೇಕು ಎಂಬ ಬಗ್ಗೆ ಒಮ್ಮತ ಮೂಡಿಲ್ಲ. ಇನ್ನು ಕೇವಲ ನಾಲ್ಕು ದಿನಗಳ ಕಾಲ ಅಧಿವೇಶನ ನಡೆಯುವುದರಿಂದ ಅಷ್ಟರೊಳಗಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡುವೆ ಚರ್ಚೆ ನಡೆದು ಅಂತಿಮ ಗೊಳ್ಳುವ ನಿರೀಕ್ಷೆಯಿದೆ.

ಪ್ರಸ್ತುತ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸದನ ನಡೆಯುತ್ತಿದೆ. ನಾಲ್ಕು ದಿನದ ಒಳಗಾಗಿ ಗೊಂದಲ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ಉಭಯ ಪಕ್ಷಗಳ ಮೂಲಗಳು ತಿಳಿಸಿವೆ.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ 35 ಸದಸ್ಯರನ್ನು ಹೊಂದಿದೆ. ಜತೆಗೆ ಸರ್ಕಾರ ರಚಿಸಲು ಕಡಿಮೆ ಶಾಸಕರು ಇರುವ ಜೆಡಿಎಸ್‌ಗೆ ಅವಕಾಶ ನೀಡಿದ್ದೇವೆ. ಹೀಗಾಗಿ ಕಾಂಗ್ರೆಸ್ ಸದಸ್ಯನನ್ನು ಮೆಲ್ಮನೆಯಲ್ಲಿ ಸಭಾಪತಿ ಮಾಡಬೇಕು ಎಂಬ ಒತ್ತಾಯ ಕಾಂಗ್ರೆಸ್ ಇಟ್ಟಿದೆ. ಈ ನಿಲುವನ್ನು ಸಮರ್ಥ ವಾಗಿ ಮಂಡಿಸುತ್ತಿರುವ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಹಿರಿಯ ಸದಸ್ಯರಾದ ಎಸ್.ಆರ್. ಪಾಟೀಲ್ ಅವರು ಸಭಾಪತಿ ಆಗಬೇಕು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. 

ಆದರೆ ಜೆಡಿಎಸ್ ಪಕ್ಷವು ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಸ್ಥಾನವನ್ನು ಕಾಂಗ್ರೆಸ್‌ನ ರಮೇಶ್‌ಕುಮಾರ್ ಅವರಿಗೆ ಬಿಟ್ಟುಕೊಟ್ಟಿ ದ್ದೇವೆ. ಅಲ್ಲಿ ಉಪ ಸಭಾಧ್ಯಕ್ಷ ಸ್ಥಾನವನ್ನು ನಾವು ತೆಗೆದುಕೊಂಡಿದ್ದೇವೆ. ಅದೇ ರೀತಿ ವಿಧಾನಪರಿಷತ್‌ನಲ್ಲಿ ಸಭಾಪತಿ ಸ್ಥಾನವನ್ನು ನಮಗೆ ಬಿಟ್ಟುಕೊಟ್ಟು ಉಪ ಸಭಾಪತಿ ಸ್ಥಾನವನ್ನು ನೀವು ತೆಗೆದುಕೊಳ್ಳಿ.  ಹಂಗಾಮಿ ಭಾಪತಿ ಆಗಿರುವ ಬಸವರಾಜ ಹೊರಟ್ಟಿ ಅವರು ಹಿರಿಯರು ಹಾಗೂ ಸಮರ್ಥರಿರುವ ಕಾರಣ ಅವರನ್ನು ಸಭಾಪತಿಗಳಾಗಿ ಮುಂದು ವರೆಯಲು ಅವಕಾಶ ಕೊಡಿ ಎಂದು ಪ್ರಸ್ತಾಪ ಇಟ್ಟಿದ್ದಾರೆ.ಎರಡೂ ಪಕ್ಷಗಳು ತಮ್ಮ ನಿರ್ಧಾರ ಸಡಿಲಿಸದೆ ಪಟ್ಟು ಹಿಡಿದಿರುವುದರಿಂದ ಸಮಸ್ಯೆ ಉಂಟಾಗಿದೆ.

Follow Us:
Download App:
  • android
  • ios