ಬೆಂಗಳೂರಲ್ಲಿ ಒಂದು ಸೂರಿನ ಕನಸು ಹೊತ್ತು ನೀವೇನಾದ್ರೂ ಬಿಡಿಎಗೆ ಅರ್ಜಿ ಹಾಕ್ಕೊಂಡ್ ಕೂತಿದ್ದೀರಾ? ಹಾಗೆ ಸುಮ್ಮನೆ ಕೂತರೆ ಈ ಜನ್ಮದಲ್ಲಿ ನಿಮಗೆ ಸೂರು ಸಿಗಲ್ಲ ಬಿಡಿ. ಸೂರು ಬೇಕಾದರೆ  ಕಾಸು ಕೊಡಲೇಬೇಕು. ಅಷ್ಟಕ್ಕೂ ನಿಮ್ಮನ್ನು ಇಲ್ಲಿ ಡೀಲ್'​ಗೆ ಕರೆಯೋದು ಅಧಿಕಾರಿಗಳಲ್ಲ ಬ್ರೋಕರ್​ಗಳು.

ಬೆಂಗಳೂರು (ನ.25): ಬೆಂಗಳೂರಲ್ಲಿ ಒಂದು ಸೂರಿನ ಕನಸು ಹೊತ್ತು ನೀವೇನಾದ್ರೂ ಬಿಡಿಎಗೆ ಅರ್ಜಿ ಹಾಕ್ಕೊಂಡ್ ಕೂತಿದ್ದೀರಾ? ಹಾಗೆ ಸುಮ್ಮನೆ ಕೂತರೆ ಈ ಜನ್ಮದಲ್ಲಿ ನಿಮಗೆ ಸೂರು ಸಿಗಲ್ಲ ಬಿಡಿ. ಸೂರು ಬೇಕಾದರೆ ಕಾಸು ಕೊಡಲೇಬೇಕು. ಅಷ್ಟಕ್ಕೂ ನಿಮ್ಮನ್ನು ಇಲ್ಲಿ ಡೀಲ್'​ಗೆ ಕರೆಯೋದು ಅಧಿಕಾರಿಗಳಲ್ಲ ಬ್ರೋಕರ್​ಗಳು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿ ಆವರಣದಲ್ಲೇ ಬ್ರೋಕರ್​ಗಳ ಡೀಲ್ ನಡೆಯುತ್ತದೆ. ನಿವೇಶನ ಮಾರಾಟ ಹಾಗೂ ಖರೀದಿಸುವ ಬಗ್ಗೆ ರೇಟ್ ಫಿಕ್ಸ್ ಮಾಡೋದು ಕೂಡ ಇದೇ ಬೋಕರ್​ಗಳು. ಅಷ್ಟಕ್ಕೂ ಬ್ರೋಕರ್​ಗಳಿಗೆ ನಿಮ್ಮನ್ನ ಪರಿಚಯಿಸಿ ಕೊಡುವುದೇ ಅಧಿಕಾರಿಗಳೂ. ಅಷ್ಟರ ಮಟ್ಟಿಗೆ ಈ ಡೀಲ್ ಕುಳಗಳು ಫೇಮಸ್. 2 ವರ್ಷದ ಹಿಂದೆ ಬಿಡಿಎದಲ್ಲಿ ಲಂಚದ ಹಾವಳಿ ಹೆಚ್ಚಿದೆ ಎಂದು ದೂರು ನೀಡಿದ್ದರಿಂದ ಲೋಕಾಯುಕ್ತರು ದಾಳಿ ನಡೆಸಿದ್ದರು. ಆಗ ಸ್ವಲ್ಪ ಲಂಚದ ಹಾವಳಿಗೆ ಬ್ರೇಕ್ ಬಿದ್ದಿತ್ತು.. ಈಗ ಮತ್ತೆ ಡೀಲ್​ದಂಧೆ ಚಿಗುರಿಕೊಂಡಿದೆ.

ಮತ್ತೊಮ್ಮೆ ಬ್ರೋಕರ್ ಹಾವಳಿ ತಪ್ಪಿಸುವಂತೆ ಸಾರ್ವಜನಿಕರು ಲೋಕಾಯುಕ್ತರ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ, ಬಿಡಿಎದಲ್ಲಿ ಕೆಲಸ ಆಗಬೇಕಂದ್ರೆ ರೊಕ್ಕ ಬಿಚ್ಚಲೇಬೇಕು ಅನ್ನೋದು ಮತ್ತೊಮ್ಮೆ ಖುಲ್ಲಂ ಖುಲ್ಲಾ ಆಗಿದೆ.

ವರದಿ: ನಂದೀಶ್