ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ರಾಜ್ಯದ ಪ್ರಭಾವಿ ಸಚಿವರು ಮೇಲೆ ಗಂಭೀರ ಆರೋಪ ಎದುರಾಗಿದೆ.
ಬೆಂಗಳೂರು : ರಾಜ್ಯದ ಪ್ರಭಾವಿ ಸಚಿವರುಗಳಿಗೆ ಲೋಕಸಭಾ ಚುನಾವಣಾ ಬೆನ್ನಲ್ಲೇ ಸಂಕಷ್ಟ ಎದುರಾಗಿದೆ. ಸಚಿವ ಹೆಚ್.ಡಿ ರೇವಣ್ಣ ಹಾಗೂ ಹೆಚ್.ಸಿ ಮಹದೇವಪ್ಪ ವಿರುದ್ಧ 3163 ಕೋಟಿ ಮೊತ್ತದ ಟೆಂಡರ್ ಗೋಲ್ ಮಾಲ್ ಆರೋಪ ಎದುರಾಗಿದೆ.
600 ಕೋಟಿಗೂ ಹೆಚ್ಚು ಮೊತ್ತದ ಗೋಲ್‌ಮಾಲ್ ಮಾಡಿದ್ದಾಗಿ ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. KRDCL ಸಂಸ್ಥೆ ಮೂಲಕ 1,448.65 ಕೋಟಿ ಮೊತ್ತದ ಹತ್ತು ಪ್ಯಾಕೇಜ್ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು.
KRDCL ನಿರ್ದೇಶಕ ಹುದ್ದೆಗೆ ಶಿವಕುಮಾರ್ ಎಂಬುವವರನ್ನ ನೇಮಕ ಮಾಡಿಕೊಂಡು ಟೆಂಡರ್ ನಲ್ಲಿ ಹಣಪಡೆದಿದ್ದಾಗಿ ಆರೋಪಿಸಿದ್ದಾರೆ. ಅಲ್ಲದೇ ಸಚಿವ ರೇವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟೆಂಡರ್ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
KRDCL ಲೋಕೋಪಯೋಗಿ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ತಮ್ಮ ಪ್ರಭಾವ ಬಳಸಿ ಕಡಿಮೆ ಕೋಟ್ ಮಾಡಿದ್ದ ಸಂಸ್ಥೆಗಳನ್ನ ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಅಲ್ಲದೇ ಎಲ್ಲಾ ಹತ್ತು ಪ್ಯಾಕೇಜ್‌ಗಳನ್ನ ರೇವಣ್ಣ ತಮ್ಮವರಿಗೆ ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
