ಕೇಂದ್ರ ಸರ್ಕಾರದ ಉಚಿತ ಗ್ಯಾಸ್ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ಅವರು ಹಾಕಿದ್ದ ಪೋಸ್ಟ್‌ಗೆ ಅವರು ಈ ಕಾಮೆಂಟ್ ಹಾಕಿ ಎಡವಟ್ಟು ಮಾಡಿಕೊಂಡಿದ್ದರು

ತುಮಕೂರು(ನ.16): ಫೇಸ್‌ಬುಕ್‌ನಲ್ಲಿ ಕೋಮುಭಾವನೆ ಕೆರಳಿಸುವ ಪ್ರತಿಕ್ರಿಯೆ ನೀಡಿದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ವ್ಯಾಪ್ತಿಯ ಹೆಬ್ಬೂರು ಠಾಣೆಯ ಪೊಲೀಸ್ ಪೇದೆಯೊಬ್ಬರನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ. ‘ಮುಸ್ಲಿಮರಿಗೆ ಉಚಿತ ಗ್ಯಾಸ್ ಕೊಡಬೇಡಿ. ಅವರು ಬಿಜೆಪಿಗೆ ಮತ ಹಾಕಲ್ಲ’ ಎಂದು ಪೇದೆ ಎಂ.ಸಿ. ಮಹೇಶ್ ಕಾಮೆಂಟ್ ಮಾಡಿದ್ದರು. ಕೇಂದ್ರ ಸರ್ಕಾರದ ಉಚಿತ ಗ್ಯಾಸ್ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ಅವರು ಹಾಕಿದ್ದ ಪೋಸ್ಟ್‌ಗೆ ಅವರು ಈ ಕಾಮೆಂಟ್ ಹಾಕಿ ಎಡವಟ್ಟು ಮಾಡಿಕೊಂಡಿದ್ದರು.