ರೇಪಿಸ್ಟ್’ಗಳನ್ನು ಬಂಧಿಸಬೇಕಾದರೆ ತನ್ನೊಂದಿಗೆ ಮೊದಲು ಸೆಕ್ಸ್ ನಡೆಸಬೇಕೆಂದು ಪೊಲೀಸ್ ಅಧಿಕಾರಿ ಸಂತ್ರಸ್ತೆಗೆ ಪೀಡಿಸಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.

ರಾಂಪುರ, ಉತ್ತರ ಪ್ರದೇಶ: ರೇಪಿಸ್ಟ್’ಗಳನ್ನು ಬಂಧಿಸಬೇಕಾದರೆ ತನ್ನೊಂದಿಗೆ ಮೊದಲು ಸೆಕ್ಸ್ ನಡೆಸಬೇಕೆಂದು ಪೊಲೀಸ್ ಅಧಿಕಾರಿ ಸಂತ್ರಸ್ತೆಗೆ ಪೀಡಿಸಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

37 ವರ್ಷದ ಮಹಿಳೆ ಮೇಲೆ ಇಬ್ಬರು ವ್ಯಕ್ತಿಗಳು ಕಳೆದ ಫೆಬ್ರವರಿಯಲ್ಲಿ ಅತ್ಯಾಚಾರ ನಡೆಸಿದ್ದಾರೆ. ಆದರೆ ಅವರಿಬ್ಬರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಮಹಿಳೆ ಗಂಜ್ ಠಾಣೆಯ ಪೊಲೀಸರ ಬಳಿ ಸಹಾಯಕ್ಕಾಗಿ ತೆರಳಿದ್ದಾಳೆ. ಆರೋಪಿಗಳಿಂದ ಜೀವಭಯವಿರುವುದಾಗಿ ದೂರು ನೀಡಿದ್ದಾಳೆ.

ಆದರೆ ಅಲ್ಲಿ ಆಕೆಗೆ ಇನ್ನೊಂದು ಆಘಾತವಾಗಿದೆ. ಅಲ್ಲಿನ ಸಬ್-ಇನಸ್ಪೆಕ್ಟರ್ ಜೈಪ್ರಕಾಶ್ ಸಿಂಗ್ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಿದ್ದಾನೆ. ಅದಲ್ಲದೇ ಆತನೊಂದಿಗೆ ಸೆಕ್ಸ್ ಮಾಡಲು ಪೀಡಿಸಿದ್ದಾನೆ.

ಪೊಲಿಸ್ ಅಧಿಕಾರಿಯ ಕಿರುಕಳದಿಂದ ಬೇಸತ್ತ ಸಂತ್ರಸ್ತ ಮಹಿಳೆ ಆತನ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಈಗ ಜಿಲ್ಲಾ ವರಿಷ್ಠಾದಧಿಕಾರಿಗೆ ದೂರು ನೀಡಿದ್ದಾಳೆ.