ಸಾಫ್ಟ್'ವೇರ್ ಕಂಪನಿಯ ಮಹಿಳೆಯರು ಶೌಚಾಲಯಕ್ಕೆ ಹೋದ ವೇಳೆ ಮೊಬೈಲ್ ಕ್ಯಾಮರಾ ಇಟ್ಟು ವಿಡಿಯೋ ಮಾಡುತ್ತಿದ್ದ.  

ಬೆಂಗಳೂರು(ಜೂ.05): ಶೌಚಾಲಯಕ್ಕೆ ಹೋದ ಮಹಿಳೆಯರನ್ನು ಕದ್ದು ವಿಡಿಯೋ ಮಾಡುತ್ತಿದ್ದ ಕಾಮುಕನೊಬ್ಬನನ್ನು ಎಚ್'ಎಎಲ್ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳೂರು ಮೂಲದ ಪರಮೇಶ್ (24) ಬಂಧಿತ ಆರೋಪಿ. ಈತ ಬೆಂಗಳೂರಿನ ಕುದ್ದಲಹಳ್ಳಿ ಬಳಿಯಿರುವ ಕನ್ಸ್ಟೆಂಟ್ರಿಕ್ಸ್‌ ಸಾಪ್ಟ್ ವೇರ್ ಕಂಪನಿಯ ಫುಡ್ ಕೌಂಟರ್'ನಲ್ಲಿ ಕೆಲಸ ಮಾಡುತ್ತಿದ್ದು, ಸಾಫ್ಟ್'ವೇರ್ ಕಂಪನಿಯ ಮಹಿಳೆಯರು ಶೌಚಾಲಯಕ್ಕೆ ಹೋದ ವೇಳೆ ಮೊಬೈಲ್ ಕ್ಯಾಮರಾ ಇಟ್ಟು ವಿಡಿಯೋ ಮಾಡುತ್ತಿದ್ದ. ಜೂನ್ 3 ರಂದು 25 ವರ್ಷದ ಟೆಕ್ಕೆಯೊಬ್ಬರ ವಿಡಿಯೊ ಚಿತ್ರಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದ. ಸದ್ಯ ಪರಮೇಶ್'ನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.