Asianet Suvarna News Asianet Suvarna News

ಜಯಾ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರಿಗೆ ಕಾದಿದೆ ಗ್ರಹಚಾರ : ಅಮ್ಮ ಎದ್ದೇಳದ್ದಕ್ಕೆ ಅಭಿಮಾನಿ ಆತ್ಮಹತ್ಯೆ

ನಡುವೆ, ಜಯಲಲಿತಾ ಅವರು ಗುಣಮುಖರಾಗದೇ ಇರುವುದರಿಂದ ಬೇಸತ್ತು ತಿರುಪುರ ಜಿಲ್ಲೆಯ 70 ವರ್ಷದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

Cop arrest men spared gossip news for jaya

ಚೆನ್ನೈ(ಅ.14): ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಗಾಳಿಸುದ್ದಿಗಳನ್ನು ಹರಡುತ್ತಿದ್ದ ಇನ್ನಿಬ್ಬರನ್ನು ಶುಕ್ರವಾರ ಬಂಸಲಾಗಿದೆ.

ಎಐಎಡಿಎಂಕೆ ಮಹಿಳಾ ಕಾರ್ಯಕರ್ತೆಯೊಬ್ಬರು ನೀಡಿದ ದೂರನ್ನು ಆಧರಿಸಿ ತೊಂಡಮತ್ತೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನ ಇಬ್ಬರು ಉದ್ಯೋಗಿಗಳನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ವದಂತಿ ಸಂಬಂಧ ಬಂಧಿತರಾದವರ ಸಂಖ್ಯೆ 40ಕ್ಕೇರಿದಂತಾಗಿದೆ.

ಕಾರ್ಯಕರ್ತ ಆತ್ಮಹತ್ಯೆ: ಈ ನಡುವೆ, ಜಯಲಲಿತಾ ಅವರು ಗುಣಮುಖರಾಗದೇ ಇರುವುದರಿಂದ ಬೇಸತ್ತು ತಿರುಪುರ ಜಿಲ್ಲೆಯ 70 ವರ್ಷದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುಪುರದಲ್ಲಿ ಎಐಎಡಿಎಂಕೆ ಮಾಜಿ ಕಾರ್ಯದರ್ಶಿ ವೆಲ್ಲಯಪ್ಪನ್ ಮೃತ ದುರ್ದೈವಿ. ಜಯಾ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ವೆಲ್ಲಯಪ್ಪನ್ ಖಿನ್ನತೆಯಿಂದ ಬಳಲುತ್ತಿದ್ದರು. ಸಿಎಂ ಆರೋಗ್ಯದ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ವರದಿ ಓದಿ ಬೇಸರಗೊಂಡ ಅವರು ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios