ಮಹಿಳಾ ಪೊಲೀಸ್ ಪೇದೆ ಲಿಂಗ ಪರಿವರ್ತನೆಗೆ ಗ್ರೀನ್ ಸಿಗ್ನಲ್!

Cop Allowed Sex Change Surgery in Maharashtra
Highlights

ಲಿಂಗ ಪರಿವರ್ತನೆಗೆ ಆಗ್ರಹಿಸಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮೊರೆ ಹೋಗಿದ್ದ ಮಹಿಳಾ ಪೊಲೀಸ್ ಪೇದೆಯೋರ್ವರು ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಸಿಎಂ ಆದೇಶದಂತೆ ಮಹಾರಾಷ್ಟ್ರದ ಬೀಡ್ ಪೊಲೀಸರು ಮಹಿಳಾ ಪೇದೆಯ ಲಿಂಗ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಫಡ್ನವೀಸ್ ಎರಡು ತಿಂಗಳ ಹಿಂದೆಯೇ ಇವರ ಮನವಿ ಪುರಸ್ಕರಿಸಿ ಆದೇಶ ಹೊರಡಿಸಿದ್ದೆರು. ಆದರೆ ಕೆಲವು ತಾಂತ್ರಿಕ ಕಾರಣಗಳಿಗಾಗಿ ಬೀಡ್ ಪೊಲೀಸರು ಲಿಂಗ ಪರಿವರ್ತನೆಗೆ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಮಹಿಳಾ ಪೇದೆಯ ಇಚ್ಛಾನುಸಾರ ಆಕೆ ಲಿಂಗ ಪಾರಿವರ್ತನೆಗೆ ಅರ್ಹಳು ಎಂದು ಬೀಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಗೋವಿಂದರಾಜನ್ ಸ್ಪಷ್ಟಪಡಿಸಿದ್ದಾರೆ.

ಲಿಂಗ ಪಾರಿವರ್ತನೆ ಬಳಿಕ ತಮ್ಮ ಹೆಸರನ್ನು ಲಲಿತ್ ಕುಮಾರ್ ಎಂದು ಬದಲಾವಣೆ ಮಾಡಿಕೊಳ್ಳುವುದಾಗಿ ಹೇಳಿರುವ ಮಹಿಳಾ ಪೇದೆ, ಸಹೋದ್ಯೋಗಿಗಳು ತಮ್ಮನ್ನು ಇದೇ ಹೆಸರಿನಿಂದ ಕರೆಯಲಿ ಎಂದು ಬಯಸಿದ್ದಾರೆ.

loader