ಭತ್ತದ ಹೊಲಗಳ ಭೂಪರಿವರ್ತನೆ ಜಾಮೀನು ರಹಿತ ಅಪರಾಧ: ಕೇರಳ ಸರ್ಕಾರ ಚಿಂತನೆ ತಿದ್ದುಪಡಿ ಮಸೂದೆಯ ಕರಡು ಸಿದ್ಧ

ತಿರುವನಂತಪುರಂ: ಭತ್ತದ ಹೊಲಗಳನ್ನು ಭೂಪರಿವರ್ತನೆಗೆ ಗುರಿಪಡಿಸುವುದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕಾನೂನು ತರಲು ಕೇರಳ ಸರ್ಕಾರ ಚಿಂತಿಸಿದೆ. ಅಲ್ಲದೆ, ಬಳಕೆ ಮಾಡದ ಭತ್ತದ ಹೊಲಗಳನ್ನು ಮಾಲೀಕನ ಅನುಮತಿ ಪಡೆಯದೇ ಕೃಷಿ ಮಾಡುವ ಅನುಮತಿಯನ್ನು ಪಂಚಾಯತ್‌ಗಳಿಗೆ ನೀಡುವ ಬಗ್ಗೆಯೂ ಸರ್ಕಾರ ಚಿಂತಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂಬಂಧ ಕೇರಳ ಭತ್ತದ ಭೂಮಿಯ ಪರಿವರ್ತನೆ, ನೀರಾವರಿ ಭೂಮಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪ ಸರ್ಕಾರದ ಮುಂದಿದೆ. ತಿದ್ದುಪಡಿ ಮಸೂದೆಯ ಕರಡು ಸಿದ್ಧವಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.