ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡಲು ತೀವ್ರ ಒಲವು ತೋರಿದ್ದಾರೆ. ಈ ಬೆಳವಣಿಗೆಯು ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ಇಬ್ಬರ ನಡುವೆ ಮುನಿಸು ಮೂಡಿದೆ ಎನ್ನಲಾಗಿದೆ.

ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ ರಾಜಕೀಯ ಪಡಸಾಲೆಯಲ್ಲಿ ಕೂತುಹಲ ಸೃಷ್ಟಿಸಿದೆ. ಸಿದ್ದರಾಮಯ್ಯನವರ ಹೇಳಿಕೆ ಈಗ ಮತ್ತೊಂದು ಲೆಕ್ಕಾಚಾರವನ್ನು ಸೃಷ್ಟಿಸಿದಂತಿದೆ. ಮಾಜಿ ಸಿಎಂ ಸಿದ್ದು-ಸಚಿವ ಸತೀಶ ರಜಾರಕಿಹೊಳಿ ಮಧ್ಯ ಮುನಿಸು ಸೃಷ್ಟಿಯಾಗಿತ್ತು ಎನ್ನುವುದು ಅದೇ ರಾಜಕೀಯ ಮೊಗಸಾಲೆ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಹರದಾಡಿತ್ತು ಎನ್ನುವ ಸಂಧರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಹಾಗಾದರೆ, ಸಿದ್ದು ಹೇಳಿದ್ದೇನು? ನಿಜವಾಗಿಯೂ ಬಿಕೆಗೆ ಸಚಿವ ಸ್ಥಾನ ಸಿಗುತ್ತಾ ಎನ್ನುವುದನ್ನು ನೋಡೋಣ ಬನ್ನಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ಕೊಡಿಸಲು ಸಿದ್ದು ಆಸಕ್ತಿ!

ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗುತ್ತೆ, ಅವರು ಆ ಸ್ಥಾನಕ್ಕೆ ಎಲಿಜಿಬಲ್ ಎನ್ನುವ ಮಾತು ಈಗಾಗಲೇ ವಿಧಾನಸೌಧವನ್ನು ಸುತ್ತುವರೆದಿವೆ. ಅಲ್ಲದೇ ಅವರ ಬೆನ್ನಿಗೆ ಅಹಿಂದ್‌ ನಾಯಕ ಸಿದ್ದರಾಮಯ್ಯ ನಿಂತಿದ್ದಾರೆ ಎನ್ನುವುದನ್ನು ಕನ್ಫರ್ಮ್ ಆದಂತಿದೆ. ಈ ನಿಟ್ಟಿನಲ್ಲೇ ಸಿದ್ದು ಅವರಿಗೆ ಸಚಿವ ಸ್ಥಾನ ಕೊಡಿಸಲು ಆಸಕ್ತಿ ಅಷ್ಟೇ ಅಲ್ಲ, ತೀವ್ರ ಒಲವನ್ನು ತೋರಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲೇ ಈಗ ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ಮಾತು ತೀವ್ರ ಚರ್ಚೆ ಹುಟ್ಟುಹಾಕಿದಂತಿದೆ.

ಸತೀಶ ಅಸಮಾಧಾನ!

ಹೌದು ಈ ಹಿಂದೆ ಸಚಿವ ಸ್ಥಾನದ ಜತೆ ಕೆಪಿಸಿಸಿ ಸ್ಥಾನದ ಬೇಡಿಕೆ ಇಟ್ಟಿದ್ದ ಸತೀಶಗೆ ಹೈ ಕಮಾಂಡ್‌ ಕಡ್ಡಿ ತುಂಡರಿಸಿದಂತೆ ಒಬ್ಬ ವ್ಯಕ್ತಿ ಒಂದು ಸ್ಥಾನ ಎಂದು ಅವರ ಬಾಯಿಗೆ ಬೀಗ ಹಾಕಿತ್ತು. ಆದರೀಗ ಬಿ.ಕೆ.ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸ್ಥಾನದ ಜತೆ ಸಚಿವ ಸ್ಥಾನದಲ್ಲಿ ಮುಂದುವರೆಯಲು ಅರ್ಹ ಎಂದು ಹೇಳಿದ ಸಿದ್ದು ದಾಟಿಗೆ, ಸತೀಶ್ ಆಪ್ತರ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇತ್ತಾ ಸಿದ್ದು-ಸತೀಶ ನಡುವೆ ಮುನಿಸು?

ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ನಡುವೆ ನಡೆದ ಮುನಿಸಾಗಿತ್ತಾ? ಎನ್ನುವ ಪ್ರಶ್ನೆಯ ನಡುವೆ ಈ ತರಹ ಬೆಳಣಿಗೆ ನಡೆದಿರುವುದು ನಿಜಕ್ಕೂ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೇ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರ್ಗಿ ಪ್ರವಾಸ ರದ್ದುಗೊಳಿಸಿ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.

ಶನಿವಾರ ದಿಲ್ಲಿಗೆ ಪಯಣ!

ಇನ್ನೆರಡು ದಿನದಲ್ಲಿ ದಿಲ್ಲಿ ವರಿಷ್ಠರ ಜತೆ ಮಾತುಕತೆ ನಡೆಯಲಿದ್ದು, ಬಿಕೆ, ಡಿಕೆ ಸಿದ್ದು ದಿಲ್ಲಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಬಹುತೇಕ ಫೈನಲ್‌ ಆಗುವ ಸಾಧ್ಯತೆ ಇದೆ. ಆದ್ದರಿಂದ ಈಗ ಬಿ.ಕೆ.ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.