ನೇಮಕ ಪ್ರಕ್ರಿಯೆಯಲ್ಲಿ ಸರ್ಕಾರ ‘ಸೇವಾ ಹಿರಿತನ’ವನ್ನು ಪರಗಣಿಸಿಲ್ಲ. ಲೆ|ಜ| ಬಿಪಿನ್ ರಾವತ್’ಕ್ಕಿಂತಲೂ ಹೆಚ್ಚು ಅನುಭವ ಹೊಂದಿದ್ದ ಲೆ|ಜ| ಪ್ರವೀಣ್ ಬಕ್ಷಿ ಹಾಗೂ ಲೆ|ಜ| ಮುಹಮ್ಮದ್ ಅಲಿ ಅಂಥವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿ (ಡಿ.18): ಭೂಸೇನೆ ಹಾಗೂ ವಾಯುಸೇನೆಗೆ ನೂತನಮುಖ್ಯಸ್ಥರನ್ನು ನೇಮಿಸಿರುವ ಕೇಂದ್ರ ಸರ್ಕಾರದ ಕ್ರಮವು ವಿವಾದವನ್ನು ಹುಟ್ಟುಹಾಕಿದೆ.

ಭೂಸೇನೆಗೆ ಮುಖ್ಯಸ್ಥರಾಗಿ ಲೆ|ಜ| ಬಿಪಿನ್ ರಾವತ್ ಅವರನ್ನು ನೇಮಿಸುವಾಗ ಕೇಂದ್ರ ಸರ್ಕಾರ ನಿಯಮಗಳನ್ನು ಪಾಲಿಸಲ್ಲಾಗಿಲ್ಲವೆಂದು ಆರೋಪಿಸಲಾಗಿದೆ.

ನೇಮಕ ಪ್ರಕ್ರಿಯೆಯಲ್ಲಿ ಸರ್ಕಾರ ‘ಸೇವಾ ಹಿರಿತನ’ವನ್ನು ಪರಗಣಿಸಿಲ್ಲ. ಲೆ|ಜ| ಬಿಪಿನ್ ರಾವತ್’ಕ್ಕಿಂತಲೂ ಹೆಚ್ಚು ಅನುಭವ ಹೊಂದಿದ್ದ ಲೆ|ಜ| ಪ್ರವೀಣ್ ಬಕ್ಷಿ ಹಾಗೂ ಲೆ|ಜ| ಮುಹಮ್ಮದ್ ಅಲಿ ಅಂಥವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಲೆ|ಜ| ಬಿಪಿನ್ ರಾವತ್ ಅವರ ಅನುಭವ ಹಾಗೂ ಸಾಮರ್ಥ್ಯ ದ ಬಗ್ಗೆ ನಮಗೆ ಸಂಪೂರ್ಣ ಗೌರವವಿದೆ. ಆದರೆ, ಇತರರ ಸೇವಾ ಹಿರಿತನವನ್ನೇಕೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ, ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.

ಸೇನೆಯು ಸಾರ್ವಜನಿಕ ಸಂಸ್ಥೆಯಾಗಿರುವುದರಿಂದ ದೇಶದ ಜನರು ಸರ್ಕಾರದಿಂದ ಉತ್ತರ ಬಯಸುತ್ತಿದೆ ಎಂದು ಮನೀಶ್ ತಿವಾರಿ ಹೇಳಿದ್ದಾರೆ.

ಭೂಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ಜನರಲ್ ಬಿಪಿನ್ ರಾವತ್ ಹಾಗೂವಾಯುಸೇನೆಯ ಏರ್ ಮಾರ್ಷಲ್ ಆಗಿ ಬೀರೇಂಧರ್ ಸಿಂಗ್ ಧನೋವಾರನ್ನು ಕೇಂದ್ರ ಸರ್ಕಾರ ನಿನ್ನೆ ನೇಮಿಸಿದೆ.

ಡಿಸೆಂಬರ್ 31 ರಂದು ಹಾಲಿ ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ನಿವೃತ್ತಲಾಗಲಿದ್ದಾರೆ.