ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ನೀಡಲಾಗಿದೆ. ಆದರೂ ಎಸಿಬಿ ಪೊಲೀಸರು FIR ದಾಖಲಿಸುತ್ತಲ್ಲ ಎಂದು ಬಸವೇಗೌಡ ಆರೋಪ ಮಾಡಿದ್ದಾರೆ.
ಮಂಡ್ಯ (ನ.20): ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿರುದ್ಧ ಗಂಭೀರ ಆರೋಪವೊಂದದು ಕೇಳಿ ಬಂದಿದೆ.
ಇಲಾಖೆಯ ವಿವಿಧ ಟೆಂಡರ್ ಕಾಮಗಾರಿಲ್ಲಿ ಪ್ರಕ್ರಿಯೆಯಲ್ಲಿ ಸುಮಾರು 5.5 ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮಂಡ್ಯದ ಗುತ್ತಿಗೆದಾರರೊಬ್ಬರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಈ ಸಂಬಂಧ ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ನೀಡಲಾಗಿದೆ. ಆದರೂ ಎಸಿಬಿ ಪೊಲೀಸರು FIR ದಾಖಲಿಸುತ್ತಲ್ಲ ಎಂದೂ ಬಸವೇಗೌಡ ಆರೋಪ ಮಾಡಿದ್ದಾರೆ.
ವಿವಿಧ ಕಾಮಗಾರಿ ಅನುದಾನ ಬಿಡುಗಡೆ ಮತ್ತು ಟೆಂಡರ್ ಅನುಮೋದನೆ ಪ್ರಕ್ರಿಯೆಯಲ್ಲಿ ಸಚಿವರು, ವಿಶೇಷ ಕರ್ತವ್ಯಾಧಿಕಾರಿ ಜನಾರ್ಧನ, ಇಲಾಖೆಯ ಕಾರ್ಯದರ್ಶಿ ಸಿದ್ದಗಂಗಪ್ಪ ಹಾಗೂ ಆತಂರಿಕ ಆರ್ಥಿಕ ಸಲಹೆಗಾರ ಚಂದ್ರಶೇಖರ್ ಸೇರಿ ಸುಮಾರು 5.5 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಮಂಡ್ಯದ ಗುತ್ತಿಗೆದಾರ ಬಸವೇಗೌಡ ಆರೋಪ ಮಾಡಿದ್ದಾರೆ.
