Asianet Suvarna News Asianet Suvarna News

ಹಸಿವಿನಿಂದ ಸಾಯುವುದಕ್ಕೂ ಮುನ್ನಾ ನಮ್ಮನ್ನು ಸಂಪರ್ಕಿಸಿ : ನ್ಯಾಯಬೆಲೆ ಅಂಗಡಿ ಬೋರ್ಡ್

‘ಹಸಿವಿನಿಂದ ಸಾಯುವುದಕ್ಕೂ ಮುನ್ನಾ ನೀವು ನಮ್ಮನ್ನು ಸಂಪರ್ಕಿಸಿ’ ಎಂದು ಜಾರ್ಖಂಡ್ ನ ಪಡಿತರ ವಿತರಣಾ ಕೇಂದ್ರವೊಂದರಲ್ಲಿ ಬೋರ್ಡ್ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಹಸಿವಿನಿಂದಾಗಿ ಹಲವರು ಸಾವಿಗಿಡಾದ ಬಗ್ಗೆ ವರದಿಗಳಾದ ಹಿನ್ನೆಲೆಯಲ್ಲಿ,  ರೇಶನ್‌ಕಾರ್ಡ್ ಇಲ್ಲದವರಿಗೂ ಆಹಾರ ಧಾನ್ಯ ವಿತರಿಸುವಂತೆ ಅಲ್ಲಿನ ಸರ್ಕಾರ ಆದೇಶಿಸಿದ ಬಳಿಕ ಈ ನಾಮಫಲಕ ರೇಶನ್ ಅಂಗಡಿ ಮುಂದೆ ಪ್ರದರ್ಶಿಸಲ್ಪಟ್ಟಿದೆ.

Contact us before dying of starvation PDS dealer hangs

ರಾಂಚಿ: ‘ಹಸಿವಿನಿಂದ ಸಾಯುವುದಕ್ಕೂ ಮುನ್ನಾ ನೀವು ನಮ್ಮನ್ನು ಸಂಪರ್ಕಿಸಿ’ ಎಂದು ಜಾರ್ಖಂಡ್ ನ ಪಡಿತರ ವಿತರಣಾ ಕೇಂದ್ರವೊಂದರಲ್ಲಿ ಬೋರ್ಡ್ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಹಸಿವಿನಿಂದಾಗಿ ಹಲವರು ಸಾವಿಗಿಡಾದ ಬಗ್ಗೆ ವರದಿಗಳಾದ ಹಿನ್ನೆಲೆಯಲ್ಲಿ,  ರೇಶನ್‌ಕಾರ್ಡ್ ಇಲ್ಲದವರಿಗೂ ಆಹಾರ ಧಾನ್ಯ ವಿತರಿಸುವಂತೆ ಅಲ್ಲಿನ ಸರ್ಕಾರ ಆದೇಶಿಸಿದ ಬಳಿಕ ಈ ನಾಮಫಲಕ ರೇಶನ್ ಅಂಗಡಿ ಮುಂದೆ ಪ್ರದರ್ಶಿಸಲ್ಪಟ್ಟಿದೆ.

ಏ.೫ರೊಳಗೆ ರೇಶನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಜೋಡಣೆ ಮಾಡದಿದ್ದಲ್ಲಿ ರೇಶನ್ ಕಾರ್ಡ್ ರದ್ದು ಮಾಡುವುದಾಗಿ 2017, ಮಾ. 27ರಂದು ಜಾರ್ಖಂಡ್ ಸರ್ಕಾರ ಆದೇಶಿಸಿತ್ತು. ಸೆಪ್ಟಂಬರ್‌ನಲ್ಲಿ 11 ಲಕ್ಷ ನಕಲಿ ರೇಶನ್ ಕಾರ್ಡ್ ರದ್ದಾಗಿದ್ದವು. ಸಿಮ್ದೆಗಾ ಜಿಲ್ಲೆಯ ಕರಿಮತಿ ಗ್ರಾಮದಲ್ಲಿ ಹೆತ್ತವರ ಜೊತೆ ವಾಸಿಸುತ್ತಿದ್ದ ಸಂತೋಷಿ ಕುಮಾರಿ ಎಂಬಾಕೆಯ ಕುಟುಂಬದ ರೇಶನ್ ಕಾರ್ಡ್ ಕೂಡ ರದ್ದಾಗಿತ್ತು.

ಸಂತೋಷಿ ಕುಟುಂಬ ಒಂದು ಹೊತ್ತಿನ ಊಟಕ್ಕೂ ಪರದಾಡುತಿತ್ತು. ಆಕೆ ಶಾಲೆಯ ಮಧ್ಯಾಹ್ನದ ಬಿಸಿಯೂಟವನ್ನು ಅವಲಂಬಿಸಿದ್ದಳು. ಆದರೆ ದುರ್ಗಾಪೂಜಾ ಹಿನ್ನೆಲೆಯಲ್ಲಿ ಶಾಲೆಗೆ ರಜೆಯಿದ್ದುದರಿಂದ, ನಾಲ್ಕು ದಿನದಿಂದ ಏನೂ ತಿನ್ನದೆ ಆಕೆ ಬಳಲಿದ್ದಳು. ಸೆ.27ರಂದು ಹೊಟ್ಟೆ ನೋವೆಂದು ಹೇಳಿದ್ದ ಆಕೆ, ಮುಂದಿನ 24 ಗಂಟೆಗಳೊಳಗೆ ಸಾವಿಗೀಡಾಗಿದ್ದಳು.

ಆಧಾರ್ ಕಾರ್ಡ್ ಜೋಡಣೆಯ ಸಮಸ್ಯೆಯಿಂದಾಗಿ ಆಹಾರ ಧಾನ್ಯ ಸಿಗದೆ ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತೆ ಕವಿತಾ ಶ್ರೀವಾಸ್ತವ ಆಪಾದಿಸಿದ್ದಾರೆ. ‘ಪಿಡಿಎಸ್‌ಗೆ ಆಧಾರ್ ಕಾರ್ಡ್ ಜೋಡಣೆ ಸಮಸ್ಯೆಗೆ ಆರು ಮಂದಿ ಸಾವಿಗೀಡಾಗಿರುವುದಕ್ಕೆ ಸರ್ಕಾರದ ಪ್ರತಿಕ್ರಿಯೆ’ ಎಂದು ಕವಿತಾ ಅಭಿಪ್ರಾಯ ಪಟ್ಟಿದ್ದಾರೆ.

Follow Us:
Download App:
  • android
  • ios