ಇಂಡಿ, ವಿಜಯಪುರ (ಅ.05): ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪೊಲೀಸ್ ಪೇದೆ ಸಾವನಪ್ಪಿರುವ ಘಟನೆ ಇಂಡಿ ತಾಲೂಕಿನ ಹಳಗುಣಕಿ ಕ್ರಾಸ್ನ ಬಳಿ ನಡೆದಿದೆ.
ಮೃತ ಪೊಲೀಸ್ ಪೇದೆಯನ್ನು ಎಪಿಎಂಸಿ ಠಾಣೆಯ ರಮೇಶ್(28) ಎಂದು ಗುರುತಿಸಲಾಗಿದೆ.
ವಿಜಯಪುರಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
