ಶಾಸಕ ಬಾಗವಾನಗೆ ಟಿಕೆಟ್‌ ವಿರುದ್ಧ ಕಾಂಗ್ರೆಸ್ಸಿಗರ ಧರಣಿ

First Published 5, Apr 2018, 9:28 AM IST
Congress Workers Protest Against Makbul Bhagwan
Highlights

ನಗರ ಹಾಲಿ ಶಾಸಕ ಡಾ.ಮಕ್ಬುಲ್‌ ಬಾಗವಾನ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿಜಯಪುರ : ನಗರ ಹಾಲಿ ಶಾಸಕ ಡಾ.ಮಕ್ಬುಲ್‌ ಬಾಗವಾನ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದ ಎದುರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಜಮಾಯಿಸಿ ಬಾಗವಾನ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದು ಎಂದು ಘೋಷಣೆ ಕೂಗಿದರು.

ಪಕ್ಷದ ಕಚೇರಿ ಎದುರು ವಾಹನಗಳ ಹಳೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಬಾಗವಾನ ಹಟಾವೋ-ಕಾಂಗ್ರೆಸ್‌ ಬಚಾವೋ ಮುಂತಾದ ಘೋಷಣೆಗಳನ್ನು ಕೂಗಿದರು. ಶಾಸಕ ಡಾ.ಮಕ್ಬುಲ್‌ ಬಾಗವಾನ ಜನಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳನ್ನು ನಿರ್ಲಕ್ಷಿಸಿದ್ದಾರೆ. ನಗರ ಅಭಿವೃದ್ಧಿಯ ಬಗ್ಗೆ ಅವರಿಗೆ ಕಿಂಚಿತ್ತೂ ಗಮನವಿಲ್ಲ ಎಂಜು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿರುವ ಮೊಹ್ಮದ್‌ರಫೀಕ್‌ ಟಪಾಲ್‌, ಎಂ.ಎಂ. ಸುತಾರ, ಸಲೀಂ ಉಸ್ತಾದ, ಅಬ್ದುಲ್‌ರಜಾಕ್‌ ಹೊರ್ತಿ ಸೇರಿದಂತೆ ಹಲವಾರು ಆಕಾಂಕ್ಷಿಗಳ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

loader