ಕೊಪ್ಪಳದಲ್ಲಿ ಮಾತನಾಡಿದ ರಾಯರೆಡ್ಡಿ ಈಗಾಗಲೇ ಕಾಂಗ್ರೆಸ್ ಪಕ್ಷ ಮಾಡಿರುವ ಅಭಿವೃದ್ಧಿಯಿಂದ ನಮಗೆ ಲಾಭವಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯವೂ ಲಾಭವಾಗಲಿದೆ ಎಂದರು.
ಕೊಪ್ಪಳ (ಜ.26): ರಾಯಣ್ಣ ಬ್ರಿಗೇಡ್ ಸ್ಥಾಪನೆ ವಿಚಾರದಲ್ಲಿ ಕೆ.ಎಸ್ ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಡುವಿನ ಭಿನ್ನಾಭಿಪ್ರಾಯ ಕಾಂಗ್ರೆಸ್’ಗೆ ಲಾಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು ಈಗಾಗಲೇ ಕಾಂಗ್ರೆಸ್ ಪಕ್ಷ ಮಾಡಿರುವ ಅಭಿವೃದ್ಧಿಯಿಂದ ನಮಗೆ ಲಾಭವಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯವೂ ಲಾಭವಾಗಲಿದೆ ಎಂದರು.
ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರನ್ನು ಲೋಕಾಯುಕ್ತ ಹುದ್ದಗೆ ನೇಮಕ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ ರಾಯರೆಡ್ಡಿ, ಆರೋಪಗಳು ಇದ್ದಾಕ್ಷಣ ಭ್ರಷ್ಟರು ಎನ್ನುಲು ಸಾಧ್ಯವಿಲ್ಲ. ಅವರ ಮೇಲಿನ ಆರೋಪಗಳು ಸಾಬಿತಾಗಬೇಕು, ಆದರೆ ಅವರ ಮೇಲಿನ ಯಾವುದೇ ಆರೋಪಗಳು ಸಾಬಿತಾಗಿಲ್ಲ, ಹೀಗಾಗಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರನ್ನು ಭ್ರಷ್ಟರು ಎನ್ನಲು ಸಾಧ್ಯವಿಲ್ಲ ಎಂದರು.
