ರಾಜ್ಯದಲ್ಲಿ ಎಲ್ಲೆಡೆ ಚುನಾವಣಾ ಕಣ ರಂಗೇರುತ್ತಿದೆ. ಪಕ್ಷಗಳ ಗೆಲುವಿಗಾಗಿ ವಿವಿಧ ರೀತಿಯ ಕಸರತ್ತನ್ನು ಮಾಡುತ್ತಿವೆ. ಆದರೆ ರಾಜ್ಯ ಗುಪ್ತಚರ ಇಲಾಖೆ ವರದಿಯೊಂದನ್ನು ನೀಡಿದ್ದು ಕಾಂಗ್ರೆಸ್ ಗೆ ಗೆಲುವು ಖಚಿತ ಎನ್ನಲಾಗಿದೆ. 

ಭೋಪಾಲ್ : ಇನ್ನೇನ ಐದು ರಾಜ್ಯಗಳಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ನ್ಯೂಸ್ ಒಂದು ಲಭ್ಯವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧ್ಯ ಪ್ರದೇಶದಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿ ಇದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಭವಿಷ್ಯ ಹೇಳಿದೆ. 

ಈ ಬಗ್ಗೆ ಗುಪ್ತವಾದ ವರದಿಯೊಂದನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಅಕ್ಟೋಬರ್ 30ರಂದು ವರದಿಯೊಂದನ್ನು ಸಲ್ಲಿಸಲಾಗಿದ್ದು ಈ ವರದಿಯಲ್ಲಿ ಈ ವಿಚಾರದ ಬಗ್ಗೆ ತಿಳಿಸಲಾಗಿದೆ. 

ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಹಿಂದಿಕ್ಕಿ 230 ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.