ಗಣರಾಜ್ಯದ ಸಮಾರಂಭದಲ್ಲಿ ರಾಹುಲ್ ಗಾಂಧಿಗೆ 4ನೇ ಸಾಲಿನಲ್ಲಿ ಆಸನ: ಕಾಂಗ್ರೆಸ್ ಆಕ್ರೋಶ

First Published 25, Jan 2018, 11:50 PM IST
Congress Upset At Fourth Row For Rahul Gandhi At Republic Day Parade
Highlights

ರಾಹುಲ್ ಗಾಂಧಿ ಅವರಿಗೆ ನಾಲ್ಕನೆ ಸಾಲಿನಲ್ಲಿ ಆಸನವನ್ನು ಕಾಯ್ದಿರಿಸಲಾಗಿದ್ದು, ಅವರ ತಾಯಿ ಸೋನಿಯಾ ಗಾಂಧಿಗೆ ಮೊದಲ ಸಾಲಿನಲ್ಲಿ ಆಸನವನ್ನು ಮೀಸಲಿರಿಸಲಾಗಿದೆ.

ನವದೆಹಲಿ(ಜ.25): ಬಿಜೆಪಿ ನೇತೃತ್ವದ ಸರ್ಕಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ 69ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ 4ನೇ ಸಾಲಿನಲ್ಲಿ ಸೀಟು ಕಾದಿರಿಸುವ ಮೂಲಕ  ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನಾಳೆ ನವದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು ರಾಹುಲ್ ಗಾಂಧಿ ಅವರಿಗೆ ನಾಲ್ಕನೆ ಸಾಲಿನಲ್ಲಿ ಆಸನವನ್ನು ಕಾಯ್ದಿರಿಸಲಾಗಿದ್ದು, ಅವರ ತಾಯಿ ಸೋನಿಯಾ ಗಾಂಧಿಗೆ ಮೊದಲ ಸಾಲಿನಲ್ಲಿ ಆಸನವನ್ನು ಮೀಸಲಿರಿಸಲಾಗಿದೆ.

ಇದಕ್ಕೆ ಸ್ವತಃ ರಾಹುಲ್ ಗಾಂಧಿ ಕಚೇರಿ ಸ್ಪಷ್ಟಿಕರಣ ನೀಡಿದ್ದು, ಆಸನ ಕಾಯ್ದಿರಿಸಿರುವ ಸ್ಥಳ ಮುಖ್ಯವಲ್ಲ ಕಾರ್ಯಕ್ರಮಕ್ಕೆ ಭಾಗಿಯಾಗುವುದು ಮುಖ್ಯ. ಆದರೆ 'ಉದ್ದೇಶಪೂರ್ವಕ ಅವಮಾನ' ಎಂದು ತಿಳಿಸಿದೆ. ನಾಳೆ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಸೀಯನ್ ಒಕ್ಕೂಟದ 10 ನಾಯಕರು ಭಾಗವಹಿಸಲಿದ್ದಾರೆ.

loader