ನವದೆಹಲಿ, (ಆ.10): ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಂದ ತೆರವಾಗಿದ್ದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮಧ್ಯಂತರ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ.

ಇಂದು (ಶನಿವಾರ) ದೆಹಲಿಯಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷತೆಯ ಜವಾಬ್ದಾರಿ ವಹಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಪೂರ್ವ ವಲಯದ ನಾಯಕ ಜತೆ ಸಮಾಲೋಚನೆ ನಡೆಸುವ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಅವರಿಗೆ ಕೊಡಲಾಗಿದೆ. 

ಅದರಂತೆ ಪಶ್ಚಿಮ ವಲಯದ ಜವಾಬ್ದಾರಿಯನ್ನು ರಾಹುಲ್​ ಗಾಂಧಿ ಅವರಿಗೆ, ಉತ್ತರ ವಲಯದ ಜವಾಬ್ದಾರಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ, ದಕ್ಷಿಣ ವಲಯದ ಜವಾಬ್ದಾರಿಯನ್ನು ಮನಮೋಹನ್​ ಸಿಂಗ್​ ಅವರಿಗೆ ಹಾಗೂ ಈಶಾನ್ಯ ವಲಯದ ಜವಾಬ್ದಾರಿಯನ್ನು ಅಂಬಿಕಾ ಸೋನಿ ಅವರಿಗೆ ಕೊಡಲಾಗಿದೆ.