ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೈಗೊಂಡ ಜನಪರ ಯೋಜನೆಗಳನ್ನು ನಾಡಿನ ಪ್ರತಿಯೊಂದು ಮನೆಮನೆಗೂ ಪಲುಪಿಸುವ ಬೃಹತ್ ಆಂದೋಲನವನ್ನು ರೂಪಿಸಲು ಕೆಪಿಸಿಸಿ ಅಧ್ಯಕ್ಷರ ಡಾ. ಜಿ. ಪರಮೇಶ್ವರ್ ಮುಂದಾಗಿದ್ದಾರೆ. 'ಮನೆ ಮನೆಗೆ ಕಾಂಗ್ರೆಸ್' ಹೆಸರಿನಲ್ಲಿ ನನಡೆಯಲಿರುವ ಈ ಆಂದೋಲನಕ್ಕೆ ಮುಂದಿನ ಸಪ್ಟೆಂಬರ್'ನಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೈಗೊಂಡ ಜನಪರ ಯೋಜನೆಗಳನ್ನು ನಾಡಿನ ಪ್ರತಿಯೊಂದು ಮನೆಮನೆಗೂ ಪಲುಪಿಸುವ ಬೃಹತ್ ಆಂದೋಲನವನ್ನು ರೂಪಿಸಲು ಕೆಪಿಸಿಸಿ ಅಧ್ಯಕ್ಷರ ಡಾ. ಜಿ. ಪರಮೇಶ್ವರ್ ಮುಂದಾಗಿದ್ದಾರೆ. 'ಮನೆ ಮನೆಗೆ ಕಾಂಗ್ರೆಸ್' ಹೆಸರಿನಲ್ಲಿ ನನಡೆಯಲಿರುವ ಈ ಆಂದೋಲನಕ್ಕೆ ಮುಂದಿನ ಸಪ್ಟೆಂಬರ್'ನಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ನಿರಂತರ ಜ್ಯೋತಿ, ವಿದ್ಯಾಸಿರಿ ಸೇರಿದಂತೆ ರಾಜ್ಯ ಕಾಂಗ್ರೆಸ್ ರೂಪಿಸಿರುವ ಹತ್ತು ಹಲವು ಯೋಜನೆಗಳಿಗೆ ಸಂಬಂಧಿಸಿದ ಕಿರುಹೊತ್ತಿಗೆಗಳನ್ನು ಸಿದ್ಧಪಡಿಸಿ, ಅವುಗಳನ್ನು ರಾಜ್ಯ ಕಾಂಗ್ರೆಸ್'ನ 66 ಸಾವಿರ ಬೂತ್ ಮಟ್ಟದ ಕಾರ್ಯಕರ್ತರ ನೆರವಿನಿಂದ ಪ್ರತಿಯೊಂದು ಮನೆಗೂ ತಲುಪುವಂತೆ ಮಾಡುವುದು ಮನೆ-ಮನೆಗೆ ಕಾಂಗ್ರೆಸ್ ಆಂದೋಲನದ ಮುಖ್ಯ ಆಶಯ.
ಈ ಆಶಯ ಈಡೇರಿಕೆಗೆ ಖುದ್ದು ಅಖಾಡಕ್ಕೆ ಇಳಿಯಲಿರುವ ಡಾ. ಜಿ. ಪರಮೇಶ್ವರ್ ಅವರು 'ಪರಂ ನಡಿಗೆ ಬೂತ್ ಮಟ್ಟದ ಕಡೆಗೆ' ಹೆಸರಿನಲ್ಲಿ ರಾಜ್ಯದ ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರನ್ನು ಮುಟ್ಟಲು ರಾಜ್ಯ ಪ್ರವಾಸ ನಡೆಸಲು ಅಣಿಯಾಗಿದ್ದಾರೆ. ಇದರ ಭಾಗವಾಗಿ ಆ.28ರಿಂದ ಎರಡು ದಿನಗಳ ಕಾಲ ಹುಬ್ಬಳ್ಲಿ-ಧಾರವಾಢ, ಗದಗ, ಹಾವೇರಿ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರು ಸಿಎಂ ಜತೆ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಯಶಸ್ಸು ಸಾಧಿಸಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಮನೆ-ಮನೆಗೆ ಕಾಂಗ್ರೆಸ್ ಎಂಬ ಆಂದೋಲನ ರೂಪಿಸಲು ಕೆಪಿಸಿಸಿ ಸಜ್ಜಾಗಿದೆ.
ಈ ಯೋಜನೆಯನ್ವಯ ರಾಜ್ಯಾದ್ಯಂತ ಬೂತ್ ಮಟ್ಟದ ಏಜೆಂಟ್'ಗಳನ್ನು ಸೃಷ್ಟಿಸಿ, ಅವರ ಮೂಲಕ ಪಕ್ಷ ಹಾಗೂ ಸರ್ಕಾರದ ಯೋಜನೆಗಳನ್ನು ರಾಜ್ಯದ ಪ್ರತಿ ಮನೆಗೆ ಮುಟ್ಟಿಸಲು ಯೋಜಿಸಲಾಗಿದೆ.
ಅಂದರೆ, ರಾಜ್ಯದಲ್ಲಿ 66 ಸಾವಿರ ಬೂತ್'ಗಳಿದ್ದು, ಇದರಲ್ಲಿ ಪ್ರತಿ 15 ರಿಂದ 20 ಮಂದಿ ಕಾರ್ಯಕರ್ತರು ನೇರವಾಗಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕರ್ತರನ್ನು ನೇರವಾಗಿ ಭೇಟಿ ಮಾಡಿ ಅವರಿಗೆ ಹುರುಪು ತುಂಬಲು ಪರಮೇಶ್ವರ್ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಮೊದಲ ಹಂತದಲ್ಲಿ ಸೋಮವಾರದಂದು ಬೆಳಗ್ಗೆ 10ಕ್ಕೆ ಧಾರವಾಡ ಗ್ರಾಮಾಂತರ ಹಾಗೂ ಹುಬ್ಬಳ್ಳಿ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ, ಪ್ರತಿನಿಧಿಗಳ ಭೇಟಿ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.
ಅಂದು ಮಧ್ಯಾಹ್ನ 2ಕ್ಕೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳ ಸಭೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಪಾಲ್ಗೊಳ್ಳುವರು.
ಮಂಗಳವಾರ ಬೆಳಗ್ಗೆ 10 ಗಂಟೆಗೆ ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಬೂತ್ ಮಟ್ಟದ ಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಪಾಲ್ಗೊಳ್ಲುವರು.
ಸೆಪ್ಟೆಂಬರ್'ನಲ್ಲಿ ವಿಧ್ಯುಕ್ತ ಚಾಲನೆ: ಈ ಜಾಗೃತಿ ಕಾರ್ಯಕ್ರಮಗಳ ಬಳಿಕ ಸೆಪ್ಟೆಂಬರ್ ಮೊದಲ ವಾರದಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗೂ ಇತರ ನಾಯಕರು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ಮನೆ-ಮನೆಗೆ ಕಾಂಗ್ರೆಸ್ ಆಂದೋಲನವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ.
ಅನಂತರ ಈ ನಾಯಕರು ರಾಜ್ಯ ಪ್ರವಾಸ ಕೈಗೊಂಡು ಬೂತ್ ಮಟ್ಟದ ಎಲ್ಲ ಕಾರ್ಯಕರ್ತರರಿಗೂ ಕಾರ್ಯಕ್ರಮದ ಬಗ್ಗೆ ತಿಳುವಳಿಕೆ ಮೂಡಿಸಲಿದ್ದಾರೆ.
ಇದಾದ ನಂತರ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೂತ್ ಮಟ್ಟದ ಏಜೆಂಟ್'ಗಳ ಸಭೆಯೊಂದು ನಡೆಯಲಿದೆ. ಇದಾಗುತ್ತಿದ್ದಂತೆಯೇ ಕಾರ್ಯಕರ್ತರು ಕಿರುಹೊತ್ತಿಗೆಗಳೊಂದಿಗೆ ನಾಡಿನ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
