Asianet Suvarna News Asianet Suvarna News

ಸಿಎಂ ಆಪ್ತ ಅಧಿಕಾರಿಗೆ ಕಾಂಗ್ರೆಸ್’ನಿಂದ ಟಿಕೆಟ್

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿರುವ ಪ್ರಭು ಚವ್ಹಾಣಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಯನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಶೋಧಿಸುವಷ್ಟರಲ್ಲಿ ಪ್ರತಿ ಸಲವೂ ಕಾಲ ಮಿಂಚಿ ಹೋಗಿರುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಕೊಂಚ ಬೇಗನೇ ಪ್ರಯತ್ನ ಆರಂಭಿಸಿದೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಯಾಗಿದ್ದ ಭೀಮಸೇನ್ ಶಿಂಧೆ ಅವರನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ.

Congress Ticket For CM close Aide

ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿರುವ ಪ್ರಭು ಚವ್ಹಾಣಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಯನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಶೋಧಿಸುವಷ್ಟರಲ್ಲಿ ಪ್ರತಿ ಸಲವೂ ಕಾಲ ಮಿಂಚಿ ಹೋಗಿರುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಕೊಂಚ ಬೇಗನೇ ಪ್ರಯತ್ನ ಆರಂಭಿಸಿದೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಯಾಗಿದ್ದ ಭೀಮಸೇನ್ ಶಿಂಧೆ ಅವರನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಧರಂ ಸಿಂಗ್ ಪುತ್ರ ಹಾಗೂ ಮೇಲ್ಮನೆ ಸದಸ್ಯ ವಿಜಯ ಸಿಂಗ್ ಅವರ ಪ್ರಭಾವ ಇಲ್ಲಿ ಕಂಡುಬರುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿದೆ. ಆದರೆ ಇತ್ತೀಚೆಗೆ ಬೃಹತ್ ಸಮಾವೇಶ ನಡೆಸಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ನಿಬ್ಬೆರಗಾಗಿಸಿದೆ. ಲಂಬಾಣಿ, ಪರಿಶಿಷ್ಟ ಜಾತಿ ಸಮುದಾಯದ ಪ್ರಾಬಲ್ಯವಿದ್ದು, ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. 

ಕಳೆದ ಬಾರಿ ಕೆಜೆಪಿಯಿಂದ ಧಾನಾಜಿ ಭೀಮ ಜಾಧವ್ ಸ್ಪರ್ಧೆ ಮಾಡಿದ್ದರು. ಆದರೂ ಪ್ರಭು ಚವ್ಹಾಣ ಅವರು 23 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಕೆಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಜಾರಿತ್ತು. ಎರಡೂ ಪಕ್ಷಗಳು ಒಗ್ಗೂಡಿ ರುವುದರಿಂದ ಲಾಭವಾಗುವುದನ್ನು ತಳ್ಳಿ ಹಾಕುವಂತಿಲ್ಲ.

Follow Us:
Download App:
  • android
  • ios