ಚಂಡೀಗಡ್(ಸೆ.22): ಪಂಜಾಬ್ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಪಟಿಯಾಲದಲ್ಲಿ 43 ಪಂಚಾಯತ್ ಸಮಿತಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಶಿರೋಮಣಿ ಅಕಾಲಿ ದಳ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಮುಕ್ತಸರ್ ಜಿಲ್ಲಾ ಪರಿಷತ್ ವಲಯದ 13 ಸ್ಥಾನಗಳ ಪೈಕಿ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಲೂದಿಯಾನದ ಎಲ್ಲಾ ಆರು ಜಿಲ್ಲಾ ಪರಿಷತ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.

ಗುರುದಾಸ್ಪುರದಲ್ಲಿ 25 ಜಿಲ್ಲಾ ಪಂಚಾಯತ್ ಸ್ಥಾನಗಳ ಪೈಕಿ 15ರಲ್ಲಿ ಹಾಗೂ 213 ಪಂಚಾಯತ್ ಸಮಿತಿಗಳ ಪೈಕಿ 154ರಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಪಂಜಾಬ್ ನಲ್ಲಿ ಒಟ್ಟು 354 ಜಿಲ್ಲಾ ಪರಿಷತ್ ಹಾಗೂ 2,900 ಪಂಚಾಯತ್ ಸಮಿತಿಗಳಿಗೆ ಚುನಾವಣೆ ನಡೆದಿತ್ತು.