ಬೆಂಗಳೂರು[ಮಾ. 13] ಸದಾ ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಿತ ಟ್ವೀಟ್ ಮಾಡುತ್ತ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ರಮ್ಯಾ ಈ ಸಾರಿ ಒಳ್ಳೆಯ ವಿಚಾರ ಹಂಚಿಕೊಂಡಿದ್ದರೂ ಜನರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. 

ಚುನಾವಣಾ ಆಯೋಗದ ಮನವಿಗೆ ಪೂರಕವಾಗಿ ಟ್ವೀಟ್ ಮಾಡಿದ್ದ ರಮ್ಯಾ, ಯುವಜನರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವಾದಲ್ಲಿ ಈಗಲೇ ನೋಂದಣಿ ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರು.

ನಡಿಯಕ್ಕಾಗ್ತಿಲ್ಲ ಅಂತಿದ್ದ ರಮ್ಯಾ ದುಬೈನಲ್ಲಿ? ಪೋಟೋ ಒಂದು ವೈರಲ್

ಆದರೆ ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ಕಂಡಿರುವ ರಮ್ಯಾ, ಮೊದಲು ನೀವು ಮತದಾನ ಮಾಡುವುದು ಕಲಿತುಕೊಳ್ಳಿ... ಮೊದಲು ನೀನು ಓಟ್ ಹಾಕಮ್ಮಾ.. ಯಾವ ಚುನಾವಣೆಯಲ್ಲಿ ಮತದಾನ ಮಾಡಿದ್ದೀಯಾ ಹೇಳಮ್ಮಾ? ಎಂದು ಮುಂಯಾದ ಪ್ರಶ್ನೆ ಎದುರಿಸಬೇಕಾಗಿ ಬಂದಿದೆ.