ಬೆಂಗಳೂರು[ಫೆ. 27]  ಭಾರತದ ಪೈಲಟ್ ಒಬ್ಬರನ್ನು ಪಾಕ್ ಬಂಧಿಸಿದೆ, ಒಬ್ಬ ಪೈಲಟ್ ಹತರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವುದನ್ನು ಆಧಾರ ಮಾಡಿಕೊಂಡ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

‘ಮೋದಿ ಹತ್ಯೆ ಬಳಿಕ ಸ್ಮಾರಕ ಕಟ್ಟೋಣ’ ಚಿತ್ರದುರ್ಗ ವೈದ್ಯನ ಪೋಸ್ಟ್

ಅವರು ಮತ್ತೆ ಹೀಗೆ ಮಾಡಿದ್ದಾರೆ, ಪಾಕಿಸ್ತಾನ ಪ್ರತ್ಯುತ್ತರ ನೀಡಬಹುದು ಎಂಬ ವಿಚಾರ ನಿಮಗೆ ಗೊತ್ತಿರಲಿಲ್ಲವೆ? ನಿಮಗೆ ಗೊತ್ತಿದ್ದರೂ ನಿದ್ರಿಸುತ್ತಿದ್ದೀರಾ! ನಮ್ಮನ್ನು ಉದ್ದೇಶಿಸಿ ಮಾತನಾಡುವುದು ಬಿಟ್ಟು ಆ್ಯಪ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ.  ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಪೈಲಟ್ ಬಗ್ಗೆ ಒಂದೇ ಒಂದು ಟ್ವೀಟ್ ಸಹ ಮಾಡಿಲ್ಲ..

ಈ ರೀತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡುವ ಕೆಲಸವನ್ನು ರಮ್ಯಾ ಮಾಡಿದ್ದಾರೆ. ರಮ್ಯಾ ಅವರ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.