ನವದೆಹಲಿ[ಆ. 28]  ಜಮ್ಮು ಮತ್ತು  ಕಾಶ್ಮೀರಕ್ಕೆ ಸಂಬಂಧಿಸಿ ತಪ್ಪು ವಿಚಾರಗಳ ಸಮರ್ಥನೆಗೆ ವಿಶ್ವಸಂಸ್ಥೆಗೆ ಪಾಕಿಸ್ತಾನ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ರಾಹುಲ್ ಗಾಂಧಿ ಅವರ ಹೆಸರು ಬಳಕೆ ಮಾಡಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಯಾವತ್ತಿಗೂ ಭಾರತದ ಅವಿಭಾಜ್ಯ ಭಾಗಗಳಾಗಿಯೇ ಇರಲಿವೆ ಎಂದು ಪಕ್ಷದ ಪ್ರಕಟಣೆ ಹೇಳಿದೆ.ಪಾಕ್ ಆಕ್ರಮಿತ ಕಾಶ್ಮೀರ[ಪಿಒಕೆ], ಗಿಲ್ಗೀಟ್, ಹುಂಜಾ ಮತ್ತು ಬಲೂಚಿಸ್ಥಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಇದಕ್ಕೆ ಪಾಕಿಸ್ತಾನ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಹೇಳಿದೆ.

ಎಲ್ಲಾ ಸರಿ ಇದ್ಮೇಲೆ ಒಳಗೆ ಬಿಡ್ಲಿಲ್ಲ ಏಕೆ?: ರಾಹುಲ್ ಗಾಂಧಿ ಪ್ರಶ್ನೆ!

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರದಲ್ಲಿ ಪಕ್ಷ ಮೊದಲೇ ನಿಲುವು ಪ್ರಕಟ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪಾಕಿಸ್ತಾನ ಪ್ರಚೋದನೆ ನೀಡುತ್ತಲೇ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.