ನವವದೆಹಲಿ (ಅ.13): ಮುಸ್ಲೀಮರನ್ನು ಉದ್ದೇಶವಾಗಿಟ್ಟುಕೊಂಡು ದೇಶದಲ್ಲಿ ಏಕರೂಪ ವಸ್ತ್ರಸಂಹಿತೆ ಜಾರಿಗೊಳಿಸಬೇಕು ಎನ್ನುವ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಇದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದೆ.
ನವವದೆಹಲಿ (ಅ.13): ಮುಸ್ಲೀಮರನ್ನು ಉದ್ದೇಶವಾಗಿಟ್ಟುಕೊಂಡು ದೇಶದಲ್ಲಿ ಏಕರೂಪ ವಸ್ತ್ರಸಂಹಿತೆ ಜಾರಿಗೊಳಿಸಬೇಕು ಎನ್ನುವ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಇದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದೆ.
ಈ ಮೂಲಕ ಪ್ರಗತಿಪರ ಸಮಾಜದ ಗುರಿ ಇಟ್ಟುಕೊಂಡಿದೆ ಎನ್ನುವ ಬಿಜೆಪಿ ಕೆಲವು ರಾಜ್ಯಗಳಲ್ಲಿ ಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ವಿರೋಧಪಕ್ಷಗಳು ಟೀಕಿಸಿವೆ.
ಎಂಐಎಂ ಪಕ್ಷದ ನಾಯಕ ಅಸಾವುದ್ದೀನ್ ಓವೈಸಿ, ಏಕರೂಪ ವಸ್ತ್ರ ಸಂಹಿತೆ ಜಾರಿಗೆ ತರುವುದರಿಂದ ದೇಶದಲ್ಲಿನ ವೈವಿಧ್ಯತೆಯನ್ನು ಸಾಯಿಸಿದಂತಾಗುತ್ತದೆ ಎಂದಿದ್ದಾರೆ.
“ ಒಂದು ವೇಳೆ ಏಕರೂಪ ವಸ್ತ್ರ ಸಂಹಿತೆ ಹೆಸರಿನಲ್ಲಿ ಒತ್ತಾಯ ಮಾಡಿದರೆ ದೇಶದ ವೈವಿಧ್ಯತೆಯನ್ನು ಸಾಯಿಸಿದಂತಾಗುತ್ತದೆ. ಮುಸ್ಲೀಮರ ದೃಷ್ಟಿಕೋನದಿಂದ ನೋಡಿದರೆ ಇದು ಸರಿಯಲ್ಲ. ದಲಿತ ಮತ್ತು ಬುಡಕಟ್ಟು ಸಮುದಾಯದಲ್ಲಿಯೂ ಸಹ ವಸ್ತ್ರ ವೈವಿಧ್ಯವಿದೆ. ಹಿಂದೂಗಳಲ್ಲಿಯೂ ಸಹ ವಿಭಿನ್ನ ಸಂಪ್ರದಾಯಗಳಿವೆ" ಎಂದು ಓವೈಸಿ ಹೇಳಿದ್ದಾರೆ.